ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿ.ಯು: ಜಿಲ್ಲೆಯ ಮೊದಲಿಗರು

Last Updated 14 ಜುಲೈ 2020, 14:55 IST
ಅಕ್ಷರ ಗಾತ್ರ

ಕಾರವಾರ: ದ್ವಿತೀಯ ಪಿ.ಯು ಕಲಾ ವಿಭಾಗದ ಪರೀಕ್ಷೆಯ ಫಲಿತಾಂಶದಲ್ಲಿ ಶಿರಸಿಯ ಎಂ.ಇ.ಎಸ್ ಪಿ.ಯು ಕಾಲೇಜಿನ ಅನಘಾ ವಿ ಹೆಗಡೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅವರು 575 ಅಂಕಗಳನ್ನು (ಶೇ 95.83) ಗಳಿಸಿದ್ದಾರೆ.

ಹುಲೇಕಲ್‌ನ ಶ್ರೀದೇವಿ ಕಾಂಪೊಸಿಟ್ ಪಿ.ಯು ಕಾಲೇಜಿನ ಸಂದೀಪ ಸುಧೀರ ಮರಾಠೆ 574 (ಶೇ 95.67) ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಶಿರಸಿಯ ಎಂ.ಇ.ಎಸ್ ಪಿಯು ಕಾಲೇಜಿನ ಎಂ.ಚಿತ್ರಕನ್ಯಾ 571 ಅಂಕ (ಶೇ 95.17) ಅಂಕಗಳಿಸಿದ್ದು, ಜಿಲ್ಲೆಗೆ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ವಾಣಿಜ್ಯ ವಿಭಾಗ:ಶಿರಸಿಯ ಎಂ.ಇ.ಎಸ್ ಪಿ.ಯು ಕಾಲೇಜಿನ ಸುದೀ‍ಪ ಮಹೇಶ ಹೆಗಡೆ 590 (ಶೇ 98.33) ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ಹೊನ್ನಾವರದ ಎಂ.ಪಿ.ಇ.ಎಸ್ ಎಸ್.ಡಿ.ಎಂ ಪಿ.ಯು ಕಾಲೇಜಿನ ಸನತ್ ಗಜಾನನ ಹೆಗಡೆ 588 (ಶೇ 98) ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಶಿರಸಿಯ ಶ್ರೀ ಮಾರಿಕಾಂಬಾ ಸರ್ಕಾರಿ ಪಿ.ಯು ಕಾಲೇಜಿನ ಸ್ನೇಹಾ ಎಸ್.ನಾಯಕ 587 (ಶೇ 97.83) ಅಂಕ ಪಡೆದುಕೊಂಡು ತೃತೀಯ ಸ್ಥಾನದಲ್ಲಿದ್ದಾರೆ.

ವಿಜ್ಞಾನ ವಿಭಾಗ:ಹೊನ್ನಾವರದ ಎಂ.ಪಿ.ಇ.ಎಸ್ ಎಸ್.ಡಿ.ಎಂ ಪಿ.ಯು ಕಾಲೇಜಿನ ಶ್ರೇಯಾ ನೀಲಕಂಠ ನಾಯಕ 591 (ಶೇ 98.50) ಮೊದಲಿಗರಾಗಿದ್ದಾರೆ.ಶಿರಸಿಯ ಎಂ.ಇ.ಎಸ್ ಪಿ.ಯು ಕಾಲೇಜಿನ ಪವನ್.ಜಿ.ಹೆಗಡೆ ಹಾಗೂ ಎಂ.ಇ.ಎಸ್ ಚೈತನ್ಯ ಪಿ.ಯು ಕಾಲೇಜಿನ ರಶ್ಮಿ ಗೌಡತಲಾ 590 (ಶೇ 98.33) ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಎಂ.ಇ.ಎಸ್ ಪಿ.ಯು ಕಾಲೇಜಿನವರೇ ಆದ ಚಿನ್ಮಯ್ ಹೆಗಡೆ ಹಾಗೂ ಕವನಾ ಆರ್.ಹೆಗಡೆ ತಲಾ 588 ಅಂಕ (ಶೇ 98) ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT