ಮಂಗಳವಾರ, ಮಾರ್ಚ್ 21, 2023
30 °C
ಭಾರಿ ಮಳೆಯಿಂದಾಗಿ ಆ.6ರಂದು ಮಣ್ಣು ಕುಸಿದಿತ್ತು

ಪೆರ್ನೆಂ ಬಳಿ ಕುಸಿದಿದ್ದ ಸುರಂಗ ದುರಸ್ತಿ: ರೈಲುಗಳ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Train in tunnel Konkan railway

ಕಾರವಾರ: ಗೋವಾದ ಪೆರ್ನೆಂ ಬಳಿ ಕುಸಿದಿದ್ದ ಕೊಂಕಣ ರೈಲ್ವೆಯ ಸುರಂಗದ ದುರಸ್ತಿ ಕಾರ್ಯವು ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರೈಲು ಸಂಚಾರವು ಪುನರಾರಂಭವಾಗಿದೆ.

ಕೊಂಕಣ ರೈಲ್ವೆಯ ಕಾರವಾರ ವಲಯದಲ್ಲಿರುವ ಈ ಸುರಂಗದಲ್ಲಿ ಆ.6ರಂದು ಮಣ್ಣು ಕುಸಿದಿತ್ತು. ಆದ್ದರಿಂದ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಈ ಮಾರ್ಗದಲ್ಲಿ ಪ್ರಮುಖವಾಗಿ ಸಂಚರಿಸುವ ಆರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ರೈಲುಗಳು ಮಡಗಾಂವ್– ಲೋಂಡಾ–ಮೀರಜ್– ಪುಣೆ– ಪನ್ವೇಲ್– ಕಲ್ಯಾಣ್ ಮಾರ್ಗದಲ್ಲಿ ಸುತ್ತುಬಳಸಿ ಸಂಚರಿಸುತ್ತಿದ್ದವು.

‘ಈ ಸುರಂಗವು (384ನೇ ಕಿಲೋಮೀಟರ್‌ನಲ್ಲಿರುವ 6–7 ಸಂಖ್ಯೆ) ಮದುರೆ ಮತ್ತು ಪೆರ್ನೆಂ ರೈಲು ನಿಲ್ದಾಣಗಳ ನಡುವೆ ಇದೆ. ಅದರ ದುರಸ್ತಿ ಕಾರ್ಯವು ಪೂರ್ಣಗೊಂಡಿದ್ದು, ಹಳಿ ಸುರಕ್ಷತಾ ಪ್ರಮಾಣ ಪತ್ರವನ್ನು ಸೆ.15ರಂದು ಪಡೆದುಕೊಳ್ಳಲಾಗಿದೆ’ ಎಂದು ಕೊಂಕಣ ರೈಲ್ವೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಸುರಂಗ ದುರಸ್ತಿಯಾಗಿರುವ ಕಾರಣ ಈ ರೈಲುಗಳು ಮೊದಲಿನಂತೆ ಮಡಗಾಂ– ರೋಹಾ– ಪನ್ವೇಲ್– ಕಲ್ಯಾಣ್ ಮೂಲಕ ಸಂಚರಿಸಲಿವೆ.

ರೈಲುಗಳು: ಕಾರವಾರ, ಉಡುಪಿ, ಮಂಗಳೂರು ಮೂಲಕ ಸಾಗುವ ಎರ್ನಾಕುಳಂ ಜಂಕ್ಷನ್– ಹಜರತ್ ನಿಜಾಮುದ್ದೀನ್ ಸ್ಪೆಷಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 02617/ 02618), ಮೂಲಕ ಸಾಗುವ ಹಜರತ್ ನಿಜಾಮುದ್ದೀನ್– ಎರ್ನಾಕುಳಂ ಜಂಕ್ಷನ್ ಡುರಂತೊ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 02284/ 02283), ನವದೆಹಲಿ– ತಿರುವನಂತಪುರ ಸೆಂಟ್ರಲ್ (ರೈಲು ಸಂಖ್ಯೆ 02432/ 02431), ಲೋಕಮಾನ್ಯ ತಿಲಕ್ ಟರ್ಮಿನಸ್– ತಿರುವನಂತಪುರ ಸೆಂಟ್ರಲ್ (ರೈಲು ಸಂಖ್ಯೆ 06345/ 06346).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು