ಭಾನುವಾರ, ಏಪ್ರಿಲ್ 5, 2020
19 °C

ಜಿಲೆಟಿನ್ ಕಡ್ಡಿ, ಡಿಟೋನೇಟರ್ ವಶ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅನುಮತಿಯಿಲ್ಲದೇ ದ್ವಿಚಕ್ರ ವಾಹನದಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ರಾತ್ರಿ ನಗರದ ಹೊರವಲಯದ ಶಿರವಾಡ ಗಣೇಶ ನಗರದಲ್ಲಿ ಬಂಧಿಸಿದ್ದಾರೆ. ಅವರಿಂದ 187 ಜಿಲೆಟಿನ್ ಕಡ್ಡಿಗಳು ಮತ್ತು 100 ಡಿಟೋನೇಟರ್‌ಗಳನ್ನು ಜಪ್ತಿ ಮಾಡಲಾಗಿದೆ.

ಕದ್ರಾದ ರಾಜೀವ ನಗರ ನಿವಾಸಿ ರಮೇಶ ಪುನ್ಹಾ (36) ಹಾಗೂ ಕದ್ರಾ ಸಮೀಪದ ಗೋರೆಯ ನರೇಶ ಕೋಲಕರ (21) ಬಂಧಿತ ಆರೋಪಿಗಳು. ಇಬ್ಬರೂ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

ಸ್ಫೋಟಕಗಳು ಮತ್ತು ತಂತಿಗಳನ್ನು ತುಂಬಿದ್ದ ಚೀಲವನ್ನು ಹೋಂಡಾ ಆ್ಯಕ್ಟಿವಾ ವಾಹನದಲ್ಲಿಟ್ಟುಕೊಂಡು ಇಬ್ಬರೂ ಶಿರವಾಡ ರೈಲು ನಿಲ್ದಾಣದತ್ತ ಬರುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪಿ.ಎಸ್.ಐ ರೇವಣ ಸಿದ್ದಪ್ಪ ಜಿರಂಕಲಗಿ ನೇತೃತ್ವದ ತಂಡವು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿತು. ಸ್ಫೋಟಕಗಳನ್ನು ಎಲ್ಲಿಗೆ ಮತ್ತು ಯಾಕೆ ಸಾಗಿಸುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿಲ್ಲ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು