ಸೋಮವಾರ, ಜನವರಿ 27, 2020
14 °C
ಪದೇಪದೇ ಕೈಕೊಡುವ ಬಿ.ಎಸ್.ಎನ್.ಎಲ್ ಮೊಬೈಲ್ ಸಿಗ್ನಲ್

ಶಿರಸಿ: ‘ಟವರ್‌ ಜನರೇಟರ್‌ಗೆ ಡೀಸೆಲ್ ಬೇಕಾಗಿದೆ..’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘ಬಿ.ಎಸ್‌.ಎನ್‌.ಎಲ್ ಟವರ್‌ ಜನರೇಟರ್‌ಗೆ ಡೀಸೆಲ್ ಬೇಕಾಗಿದೆ. ದಾನಿಗಳು ಕೆಳಗಿನ ಬ್ಯಾರಲ್‌ಗೆ ದಾನ ಮಾಡಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗೆ ಬಿ.ಎಸ್‌.ಎನ್‌.ಎಲ್ ಸಂಪರ್ಕಿಸಿ...’

ಮೊಬೈಲ್ ಸಿಗ್ನಲ್‌ ಪದೇಪದೇ ಕೈಕೊಟ್ಟು ಬೇಸತ್ತು ಹೋಗಿರುವ ತಾಲ್ಲೂಕಿನ ತಾರಗೋಡ ಗ್ರಾಮಸ್ಥರು, ಈ ರೀತಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಈ ಗ್ರಾಮದ ಮೊಬೈಲ್ ಬಳಕೆದಾರರಿಗೆ ಭೈರುಂಬೆಯಲ್ಲಿರುವ ಬಿ.ಎಸ್‌.ಎನ್‌.ಎಲ್ ಟವರ್‌ನಿಂದ ಬರುವ ಸಿಗ್ನಲ್ ಒಂದೇ ಆಧಾರ. ಆದರೆ, ಅಲ್ಲಿ ವಿದ್ಯುತ್ ಕೈಕೊಟ್ಟಾಗ ಮೊಬೈಲ್ ಸಿಗ್ನಲ್ ಕೂಡ ಇರುವುದಿಲ್ಲ. ಇದರಿಂದ ತಾರಗೋಡು ಗ್ರಾಮಕ್ಕೆ ದೂರಸಂಪರ್ಕ ಸೇವೆ ಲಭಿಸುವುದಿಲ್ಲ. 

ಪದೇಪದೇ ಈ ರೀತಿ ಆಗುತ್ತಿದ್ದು, ಸಮಸ್ಯೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಸಂಸ್ಥೆಗೆ ಹಲವು ಸಲ ಮನವಿ ಮಾಡಿದ್ದರು. ಆದರೆ, ಜನರೇಟರ್‌ಗೆ ಡೀಸೆಲ್ ಹಾಕಿಸಲು ಹಣವಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಇದರಿಂದ ಬೇಸರಗೊಂಡ ಗ್ರಾಮಸ್ಥರು, ರಸ್ತೆಯ ಬದಿಯಲ್ಲಿ ಬ್ಯಾರಲ್ ಒಂದನ್ನಿಟ್ಟು, ಅದರ ಮೇಲೆ ಫಲಕವನ್ನಿಡುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು