ಮಂಗಳವಾರ, ಅಕ್ಟೋಬರ್ 27, 2020
22 °C

ಕಾರವಾರ: ನಿವೃತ್ತಿ ಹೊಂದಿದ ಯೋಧನಿಗೆ ಶುಭ ಹಾರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಭಾರತೀಯ ಸೇನೆಯಲ್ಲಿ 19 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಯೋಧ, ಚೆಂಡಿಯಾದ ಭಜನಕೇರಿಯ ದೀಪಕ್ ಪಾಂಡುರಂಗ ಗೌಡ ಅವರನ್ನು ಗ್ರಾಮಸ್ಥರು ಭಾನುವಾರ ಅಭಿಮಾನ ಪೂರ್ವಕವಾಗಿ ಸ್ವಾಗತಿಸಿದರು.

ಅವರು ಸೆ.30ರಂದು ನಿವೃತ್ತಿ ಹೊಂದಿದ್ದು, ಭಾನುವಾರ ತಮ್ಮ ಊರಿಗೆ ಮರಳಿದರು. ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ, ಅಸ್ಸಾಂ, ದೆಹಲಿ ಹಾಗೂ ಜಮ್ಮು ಕಾಶ್ಮೀರದಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು.

ಕಾರವಾರದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ತೋಡೂರಿಗೆ ಅವರು ತಲುಪಿದಾಗ ತಂದೆ ಪಾಂಡುರಂಗ ಹಾಗೂ ತಾಯಿ ಗಂಗಾಬಾಯಿ ಆರತಿ ಬೆಳಗಿ ಸ್ವಾಗತಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆದುಕೊಂಡು ಬರಲಾಯಿತು. ಇದೇವೇಳೆ, ಗ್ರಾಮದ ಯುವಕರು ದೀಪಕ್ ಅವರನ್ನು ಸನ್ಮಾನಿಸಿ ನಿವೃತ್ತ ಜೀವನಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಾಧನಾ ಪಿ.ಚೆಂಡೇಕರ್, ಗ್ರಾಮ ಲೆಕ್ಕಾಧಿಕಾರಿ ಬಸವರಾಜ,  ತೋಡೂರಿನ ಗೋವಿಂದ ದೇವ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಮಂಡಳಿ, ಭಜನಕೇರಿಯ ಸಣ್ಣಮ್ಮ ಯುವಕ ಮಂಡಳ, ಮಹಾದೇವ ಯುವಕ ಮಂಡಳಿ, ತೋಡೂರಿನ ಒಕ್ಕಲಕೇರಿ ಗೆಳೆಯರ ಬಳಗ, ರಾಯಲ್ ಫ್ರೆಂಡ್ಸ್, ಜಿಲ್ಲಾ ಹಾಲಕ್ಕಿ ಯುವ ಬಳಗ, ಬಂಟದೇವ ಯುವಕ ಮಂಡಳಿಯ ಸದಸ್ಯರು ಹಾಜರಿದ್ದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು