ಶನಿವಾರ, ಆಗಸ್ಟ್ 8, 2020
24 °C

ಮುಂಡಗೋಡ: ಯುವಕನ ವರದಿ ‘ನೆಗೆಟಿವ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ‘ಡೆಂಗಿ ಜ್ವರ ಹಾಗೂ ಕೋವಿಡ್ 19 ಸೋಂಕು ಖಚಿತಗೊಂಡಿದ್ದ ಪಟ್ಟಣದ 20 ವರ್ಷದ ಯುವಕನ ಗಂಟಲು ದ್ರವದ ವರದಿಯು ಶನಿವಾರ, ನೆಗೆಟಿವ್ ಬಂದಿದೆ’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.

ಯಾವುದೇ ಪ್ರಯಾಣ ಹಿನ್ನೆಲೆ ಹೊಂದಿರದ ಯುವಕನಲ್ಲಿ ಕಳೆದ ಸೋಮವಾರ ‘ಡೆಂಗಿ’ ದೃಢಗೊಂಡಿತ್ತು. ಅಲ್ಲದೇ ಕೋವಿಡ್ ವರದಿಯಲ್ಲಿ ಒಂದು ಸಲ ಪಾಸಿಟಿವ್, ಮತ್ತೊಂದು ಸಲ ನೆಗೆಟಿವ್ ಬಂದಿತ್ತು. ಇದರಿಂದ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದರು.

ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿರುವ ಸಾಧ್ಯತೆಯಿಲ್ಲ. ಅಲ್ಲದೇ ಯುವಕ ಸೋಂಕಿತರ ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ ಯುವಕನ ಮಾದರಿಯನ್ನು ಬೆಂಗಳೂರಿಗೆ ಕಳಿಸಿ, ವರದಿ ಬರುವರೆಗೂ ಇಲ್ಲಿನ ತಾಲ್ಲೂಕು ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿಯೇ ಚಿಕಿತ್ಸೆ ನೀಡಲು ನಿರ್ಧರಿಸಿದ್ದರು.

ಯುವಕನಲ್ಲಿ ಸೋಂಕು ಖಚಿತ ಎಂದು ವರದಿ ಬಂದ ಕಾರಣ ಪಟ್ಟಣವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ತಹಶೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗಳು, ತಜ್ಞವೈದ್ಯರ ಸಲಹೆ ಪಡೆದು, ಗಂಟಲುದ್ರವದ ಮಾದರಿಯನ್ನು ಮತ್ತೊಂದು ಸಲ ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು