ಶುಕ್ರವಾರ, ಮೇ 14, 2021
31 °C

ಜಗಳ ಬಿಡಿಸಲು ಬಂದ ಯುವಕನಿಗೇ ಚೂರಿ ಇರಿದು ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ದಾಂಡೇಲಿ: ನಗರದ ಗಾಂಧಿ ನಗರದಲ್ಲಿ ಭಾನುವಾರ ತಡರಾತ್ರಿ, ಮೂವರ ಮಧ್ಯೆ ನಡೆಯುತ್ತಿದ್ದ ಹೊಡೆದಾಟ ಬಿಡಿಸಲು ಹೋದ ಯುವಕನನ್ನೇ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.

ಸ್ಥಳೀಯ ಯುವಕ ಮನೋಜ್ ಪ್ರಕಾಶ ಪಾಟೀಲ (22) ಕೊಲೆಯಾದವರು. ಸ್ಥಳೀಯರಾದ ಫಾರೂಖ್, ಕಾರ್ತಿಕ್ ಹಾಗೂ ಇನ್ನೊಬ್ಬರು ಹೊಡೆದಾಡಿಕೊಳ್ಳುತ್ತಿದ್ದರು. ಆಗ, ಮನೋಜ್ ತಮ್ಮ ಅಣ್ಣ ಸಂದೀಪ ಪ್ರಕಾಶ ಪಾಟೀಲ‌ಗೆ ಹೊಡೆಯುವುದನ್ನು ತಪ್ಪಿಸಲು ಹೋದರು. ಅಷ್ಟರಲ್ಲಿ  ಫಾರೂಖ್ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದರು. ಮೃತ ಯುವಕ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಊರಿಗೆ ಬಂದಿದ್ದಾಗ ಈ ಕೃತ್ಯ ನಡೆದಿದೆ.

ಘಟನೆ ಸ್ಥಳಕ್ಕೆ ದಾಂಡೇಲಿ ನಗರದ ಡಿ.ವೈ.ಎಸ್ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಪ್ರಭು ಗಂಗನಹಳ್ಳಿ, ನಗರ ಪೊಲೀಸ್ ಠಾಣೆ ಪಿ.ಎಸ್.ಐ ಯಲ್ಲಪ್ಪ.ಎಸ್, ಅಪರಾಧ ವಿಭಾಗದ ಪಿ.ಎಸ್.ಐ ಮಹಾದೇವ ನಾಯ್ಕವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು