ಶಿರಸಿ: ತಾಲ್ಲೂಕಿನ ಭೈರುಂಬೆ ಸಮೀಪ ಮಂಗಳವಾರ ನಸುಕಿ ಜಾವ ಅಕ್ರಮವಾಗಿ ಮದ್ಯಸಾರ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ, ಚಾಲಕನನ್ನು ಬಂಧಿಸಲಾಗಿದೆ.

ಗೋವಾ ಕಡೆಯಿಂದ ಕೇರಳಕ್ಕೆ ಸಾಗುತ್ತಿದ್ದ ಲಾರಿಯಲ್ಲಿ ಪರವಾನಗಿ ಹೊಂದಿದ್ದ ಮದ್ಯದ ಪೆಟ್ಟಿಗೆಗಳಿದ್ದವು. ಅವುಗಳ ನಡುವೆ ಮದ್ಯಸಾರವನ್ನು ಬಚ್ಚಿಟ್ಟು ಸಾಗಣೆ ಮಾಡಲಾಗುತ್ತಿತ್ತು ಎಂಬ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಚಾಲಕ ಕೇರಳದ ಕನ್ನೂರ್ ಜಿಲ್ಲೆಯ ಪರಾಂಬಿಲ್‍ನ ಮುಹಮ್ಮದ್ ನಿಟ್ಪೂಕರನ್ (41) ಎಂಬಾತನನ್ನು ಬಂಧಿಸಲಾಗಿದೆ.

‘₹94,53,000 ಮೌಲ್ಯದ ಮದ್ಯ, ₹3,04,500 ಮೌಲ್ಯದ 5250 ಲೀ. ಮದ್ಯಸಾರ ಹಾಗೂ ₹10 ಲಕ್ಷ ಮೌಲ್ಯದ ಲಾರಿ ಸೇರಿದಂತೆ ಒಟ್ಟೂ ₹1,07,57,500 ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅಬಕಾರಿ ಉಪಧೀಕ್ಷಕ ಶಿವಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.