ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವುದು ಕೇಂದ್ರ ಕಚೇರಿ ಹಾಗೂ ಸರ್ಕಾರದ ಗಮನದಲ್ಲಿದೆ. ಸಿಬ್ಬಂದಿ ನೇಮಕವಾದರೆ ಸಮಸ್ಯೆ ನಿವಾರಣೆಯಾಗುತ್ತದೆ
ಟಿ.ನಟರಾಜ್ ಕೃಷಿ ಇಲಾಖೆ ಉಪನಿರ್ದೇಶಕ
ಸಮಸ್ಯೆ ಪರಿಹರಿಸಲಿ
‘ಕೃಷಿ ಇಲಾಖೆ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ಸೇರಿದಂತೆ ಒಟ್ಟು 2.50 ಲಕ್ಷಕ್ಕೂ ಹೆಚ್ಚು ರೈತರಿದ್ದಾರೆ. ಆದರೆ ಇಲಾಖೆಯಲ್ಲಿ 287 ಹುದ್ದೆಗಳು ಖಾಲಿ ಇವೆ. ಕೇವಲ 80 ಮಂದಿ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಇದೆ. ಇದು ರೈತರಿಗೆ ಸಕಾಲಕ್ಕೆ ಸ್ಪಂದಿಸಲು ಅಡ್ಡಿಯಾಗುತ್ತಿದೆ. ಸರ್ಕಾರ ಕೂಡಲೆ ಸಮಸ್ಯೆಯ ಗಂಭೀರತೆ ಅರಿತು ಸಿಬ್ಬಂದಿ ನೇಮಿಸಬೇಕು’ ಎನ್ನುತ್ತಾರೆ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ.