‘ಜನರ ಸಮಸ್ಯೆಗೆ ಧ್ವನಿ ಎತ್ತದವರು’
‘ಅನಂತಕುಮಾರ ಹೆಗಡೆ ಜನಪ್ರತಿನಿಧಿ ಆಗುವ ಅವಕಾಶ ಕೈತಪ್ಪಿದ ಬಳಿಕ ಜಿಲ್ಲೆಯಲ್ಲಿ ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿರಲಿಲ್ಲ. ನದಿ ತಿರುವು ಯೋಜನೆ ಶರಾವತಿ ಪಂಪ್ಡ್ ಸ್ಟೋರೇಜ್ ಸೇರಿ ವಿವಿಧ ಹೋರಾಟ ನಡೆದಾಗ ಜನರ ಪರ ನಿಲ್ಲುವ ಕೆಲಸ ಮಾಡಲಿಲ್ಲ. ಹಿಂದುತ್ವದ ಪರ ಕಾರ್ಯಕ್ರಮದಲ್ಲಿ ಪಾಲ್ಗೊಂಡಷ್ಟಕ್ಕೆ ರಾಜಕೀಯವಾಗಿ ಸಕ್ರಿಯ ಆಗಬಹುದು ಎನ್ನಲಾಗದು’ ಎಂದು ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದರು.