ಶಿರಸಿ: ತಾಲ್ಲೂಕಿನ ಉಂಚಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಉಂಚಳ್ಳಿ ಗ್ರಾಮಕ್ಕೆ ಶಿರಸಿ– ಬನವಾಸಿ ರಸ್ತೆಯಿಂದ 2 ಕಿ.ಮೀ ಸಿಮೆಂಟ್ ರಸ್ತೆ ಮಂಜೂರು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ 3 ಪರಿಶಿಷ್ಟ ಜಾತಿ ಕುಟುಂಬ ಸೇರಿ ಒಟ್ಟೂ 48 ಕುಟುಂಬಗಳಿವೆ. ಗ್ರಾಮದಿಂದ ಶಾಲೆಗೆ ತೆರಳಲು ಸೂಕ್ತ ರಸ್ತೆ ಇಲ್ಲ. ಇರುವ ರಸ್ತೆ ವಾಹನ ಚಲಾಯಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಈಗಾಗಲೇ ಸಾಕಷ್ಟು ಮನವಿ ನೀಡಿದ್ದು, ಸೂಕ್ತ ಸ್ಪಂದನೆ ಇಲ್ಲ. ಕಾರಣ ಹೊಸ ಸಿಮೆಂಟ್ ರಸ್ತೆ ಮಂಜೂರಿ ನೀಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಮ್ಮ ಭೋವಿ, ಸದಸ್ಯರಾದ ಅಣ್ಣಪ್ಪ.ಎಚ್, ರವಿತೇಜ ರೆಡ್ಡಿ, ಪ್ರಮುಖರಾದ ನಾಗರಾಜ ಭೋವಿ, ಮೋಹನ ನಾಯ್ಕ, ವಾಸು ಮಡಿವಾಳ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.