ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲ್ಲೆ: ಅಪರಾಧಿಗೆ ಜೈಲು ಶಿಕ್ಷೆ, ದಂಡ

Published : 10 ಆಗಸ್ಟ್ 2024, 14:36 IST
Last Updated : 10 ಆಗಸ್ಟ್ 2024, 14:36 IST
ಫಾಲೋ ಮಾಡಿ
Comments

ಕುಮಟಾ: ಒಂದೇ ಮನೆಯಲ್ಲಿ ವಾಸವಾಗಿದ್ದ ಅಣ್ಣ-ತಮ್ಮಂದಿರ ನಡುವೆ ಆಸ್ತಿಗಾಗಿ ಉಂಟಾದ ಗಲಾಟೆಯಲ್ಲಿ ತಮ್ಮ ಹಾಗೂ ಆತನ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ವ್ಯಕ್ತಿಗೆ ಕುಮಟಾದ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯ ಆ.7 ರಂದು ಎರಡು ವರ್ಷ ಜೈಲು ಶಿಕ್ಷೆ ಹಾಗೂ ₹೯ ಸಾವಿರ ದಂಡ ವಿಧಿಸಿದೆ.

 ಅಪರಾಧಿ ತಾಲ್ಲೂಕಿನ ಅಘನಾಶಿನಿ ಗ್ರಾಮದ ಬಿಳಿಹೊಯ್ಗೆ ನಿವಾಸಿ ಬಾಬು ಹರಿಕಂತ್ರ ಆಸ್ತಿಗೆ ಸಂಬಂಧಿಸಿದಂತೆ ಒಂದೇ ಮನೆಯಲ್ಲಿದ್ದ ತನ್ನ ತಮ್ಮ ದೇವಿದಾಸ ಹರಿಕಂತ್ರ ಹಾಗೂ ಆತನ ಹೆಂಡತಿ ನೇತ್ರಾ ಹರಿಕಂತ್ರ ಅವರ ಮೇಲೆ 2018 ಮೇ 18ರಂದು  ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಎ.ಎಸ್.ಐ ಮಹಾದೇವ ನಾಯ್ಕ ನ್ಯಾಯಾಲಯಕ್ಕೆ ಆರೋಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಆ. 7 ರಂದು  ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದೆ. ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ ಬೋರ್ಕರ್ ದೂರು ದಾರರ ಪರ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT