ಮುಂಡಗೋಡ: ತಾಲ್ಲೂಕಿನ ಅತ್ತಿವೇರಿ ಗ್ರಾಮಕ್ಕೆ ನೂತನ ಬಸ್ ಸಂಚಾರಕ್ಕೆ ಶಾಸಕ ಶಿವರಾಮ ಹೆಬ್ಬಾರ ಬುಧವಾರ ಚಾಲನೆ ನೀಡಿದರು.

ಬಸ್ಗೆ ಪೂಜೆ ಸಲ್ಲಿಸಿ, ಸ್ವತಃ ನಿಲ್ದಾಣದಲ್ಲಿ ಒಂದು ಸುತ್ತು ಬಸ್ ಓಡಿಸಿದರು.

ʼಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ಸಮಯ ನಿಗದಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮಾರ್ಗದಲ್ಲಿ ಬರುವ ಊರಿನ ಜನರು ಸಾರಿಗೆ ಬಸ್ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸ್ಥಳೀಯ ಘಟಕದಿಂದ ಮತ್ತಷ್ಟು ಬಸ್ಗಳನ್ನು ಅಗತ್ಯವಿದ್ದ ಕಡೆ ಓಡಿಸಲಾಗುವುದು. ಇರುವ ಬಸ್ಗಳಲ್ಲಿಯೇ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸೇವೆ ಒದಗಿಸಲಾಗುತ್ತಿದೆʼ ಎಂದು ಶಾಸಕ ಹೆಬ್ಬಾರ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಜ್ಞಾನದೇವ ಗುಡಿಯಾಳ, ಪಟ್ಟಣ ಪಂಚಾಯಿತಿ ಸದಸ್ಯರಾದ ಶೇಖರ ಲಮಾಣಿ, ರಜಾಖಾನ ಪಠಾಣ, ಮಹ್ಮದಗೌಸ್ ಮಕಾನದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಪ್ಪ ಗುಲ್ಯಾನವರ, ಸಿದ್ಧಪ್ಪ ಹಡಪದ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ.ನಾಯ್ಕ, ಕೆಂಜೋಡಿ ಗಲಬಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.