ಶನಿವಾರ, ಏಪ್ರಿಲ್ 1, 2023
31 °C

ಶೈಲಜಾ ಹಾಸನರ ಕಥಾ ಸಂಕಲನಕ್ಕೆ ಸಂಜೆ ಸಾಹಿತ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮೆಹಂದಳೆ ಪ್ರತಿಷ್ಠಾನದಿಂದ ದಿ.ಜಿವಾಜಿರಾವ್ ಮೆಹದಂಳೆ ಸ್ಮರಣಾರ್ಥ ನೀಡುವ 2022ನೇ ಸಾಲಿನ ‘ಸಂಜೆ ಸಾಹಿತ್ಯ ಪ್ರಶಸ್ತಿ’ಗೆ ಕವಯಿತ್ರಿ ಶೈಲಜಾ ಹಾಸನ ಅವರ ‘ನಿಲ್ಲು ನಿಲ್ಲೆ ಪತಂಗ’ ಕಥಾ ಸಂಕಲನ ಆಯ್ಕೆಯಾಗಿದೆ.

ಪ್ರಶಸ್ತಿಯು ₹10 ಸಾವಿರ ನಗದು, ಮುದ್ರಿತ ಕಥಾ ಸಂಕಲನದ ಪ್ರತಿಗಳನ್ನು ಒಳಗೊಂಡಿರಲಿದೆ. ಬೀರಣ್ಣ ನಾಯಕ ಮೊಗಟಾ ಅವರ ‘ಹಣ್ಮರ’ ದ್ವಿತೀಯ ಮತ್ತು ಮಲ್ಲಮ್ಮ ಜೊಂಡಿ ಅವರ ‘ಗೌಡ ಶ್ಯಾನಿ’ ಕಥಾ ಸಂಕಲನ ತೃತೀಯ ಸ್ಥಾನಗಳಿಸಿವೆ. ನಾಗಪತಿ ಹೆಗಡೆ ಹುಳಗೋಳ ಅವರ ‘ಕಡಲ ಒಡಲ ಮುತ್ತುಗಳು’ ಕಥಾ ಸಂಕಲನ ಸಮಾಧಾನಕರ ಬಹುಮಾನ ಪಡೆದಿದೆ.

ಪ್ರಶಸ್ತಿ ಸ್ಪರ್ಧೆಯಲ್ಲಿ 98 ಕಥಾ ಸಂಕಲನಗಳು ಇದ್ದವು. ಫೆಬ್ರುವರಿ ಕೊನೆಯ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಂಕಲನ ಬಿಡುಗಡೆ ಮತ್ತು ಪ್ರಶಸ್ತಿ ವಿತರಣೆ ಮಾಡಲಾಗುವುದೆಂದು ಪ್ರತಿಷ್ಠಾನದ ಪ್ರಮುಖ ಸಂತೋಷಕುಮಾರ ಮೆಹಂದಳೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು