ಮೂರು ಯಂತ್ರ ಖರೀದಿ ಪ್ರಸ್ತಾವವಿತ್ತು
ಮೆಗಾ ಕೋಸ್ಟಲ್ ಸರ್ಕಿಟ್ ಯೋಜನೆ ಅಡಿ ಜಿಲ್ಲೆಯ ಕರಾವಳಿ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಈ ಹಿಂದೆ ₹32 ಕೋಟಿ ಮಂಜೂರಾಗಿತ್ತು. ಈ ಅನುದಾನದಲ್ಲಿ ಗೋಕರ್ಣದ ಓಂ ಕಡಲತೀರ ಕುಡ್ಲೆ ಕಡಲತೀರ ಹಾಗೂ ಮುರ್ಡೇಶ್ವರ ಕಡಲತೀರಕ್ಕೆ ಕಡಲತೀರ ಸ್ವಚ್ಛಗೊಳಿಸುವ ಯಂತ್ರ ಒದಗಿಸಲು ಪ್ರಸ್ತಾವ ಸಲ್ಲಿಕೆಯಾಗಿತ್ತು. ‘ಕೋಸ್ಟಲ್ ಸರ್ಕಿಟ್ ಯೋಜನೆ ಅಡಿ ಮಂಜೂರಾಗಿದ್ದ ಅನುದಾನದಲ್ಲಿ ಬಹುಪಾಲು ಆಡಳಿತಾತ್ಮಕ ಕಾರಣಕ್ಕೆ ವಾಪಸ್ಸಾಯಿತು. ಹೀಗಾಗಿ ಕಡಲತೀರ ಸ್ವಚ್ಛಗೊಳಿಸುವ ಯಂತ್ರಗಳ ಖರೀದಿ ಪ್ರಕ್ರಿಯೆಯೂ ನನೆಗುದಿಗೆ ಬಿದ್ದಿತು. ಇದ್ದ ಒಂದೂ ಯಂತ್ರದ ನಿರ್ವಹಣೆ ಕಷ್ಟವಾಗಿತ್ತು. ಈಗ ಅದನ್ನು ದುರಸ್ಥಿಪಡಿಸಲಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.