ಕುಸಿಯುತ್ತಿರುವ ಗುಣಮಟ್ಟ: ಆರೋಪ
ಭಟ್ಕಳ ಪಟ್ಟಣದ ಸಂತೆ ಮಾರುಕಟ್ಟೆ ರಸ್ತೆಯ ಬಳಿಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಈಚಿನ ದಿನಗಳಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
‘ಕೆಲವೊಮ್ಮೆ ಇಲ್ಲಿ ತಯಾರಿಸುವ ಆಹಾರಗಳು ಗುಣಮಟ್ಟದಿಂದ ಕೂಡಿರುತ್ತಿಲ್ಲ. ಗುಣಮಟ್ಟದ ಆಹಾರ ಒದಗಿಸುತ್ತಾರೆಯೇ ಎನ್ನುವ ಬಗ್ಗೆ ಕಾಲಕಾಲಕ್ಕೆ ಪುರಸಭೆ ಅಧಿಕಾರಿಗಳು ಬಂದು ತಪಾಸಣೆ ಮಾಡಬೇಕು’ ಎನ್ನುವುದು ಅವರ ಆಗ್ರಹ.
‘ಪ್ರತಿನಿತ್ಯ ಇಲ್ಲಿ 250ಕ್ಕೂ ಹೆಚ್ಚು ಊಟ ವಿತರಣೆ ಮಾಡಲಾಗುತ್ತಿದೆ. ಕೂಲಿಕಾರ್ಮಿಕರು, ನಿರ್ಗತಿಕರು ಮಾತ್ರವಲ್ಲದೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಊಟ ಸವಿದು ಹೋಗುತ್ತಾರೆ’ ಎನ್ನುತ್ತಾರೆ ಕ್ಯಾಂಟೀನ್ ಸಿಬ್ಬಂದಿ.