ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿಯಲ್ಲಿ ಭೂಮಿಕಾ ಕ್ಲಬ್ ಕಾರ್ಯಕ್ರಮ ಇಂದು

Published 9 ಆಗಸ್ಟ್ 2024, 18:34 IST
Last Updated 9 ಆಗಸ್ಟ್ 2024, 18:34 IST
ಅಕ್ಷರ ಗಾತ್ರ

ಶಿರಸಿ: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಮತ್ತು ‘ಫ್ರೀಡಂ ಆಯಿಲ್’ ಸಹಯೋಗದಲ್ಲಿ ‘ಭೂಮಿಕಾ ಕ್ಲಬ್’ ಮಹಿಳೆಯರ ವಿಶೇಷ ಕಾರ್ಯಕ್ರಮ ಶನಿವಾರ (ಆಗಸ್ಟ್‌ 10) ಶಿರಸಿಯಲ್ಲಿ ನಡೆಯಲಿದೆ.

ಶಿರಸಿಯಲ್ಲಿ ಇದೇ ಮೊದಲ ಬಾರಿ ಕಾರ್ಯಕ್ರಮ ನಡೆಯುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದು. ಸ್ನೇಹಿತರು ಮತ್ತು ಆಪ್ತರೊಂದಿಗೆ ಬಂದು, ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಸಂಭ್ರಮಿಸಬಹುದು. ಹಲವು ವಿಶೇಷ ಸಂಗತಿಗಳನ್ನು ಅರಿಯುವುದರ ಜೊತೆಗೆ ಹೊಸ ಸ್ನೇಹಿತರನ್ನು ಪರಿಚಯಿಸಿಕೊಳ್ಳಬಹುದು.

ನಟಿ ರೂಪಿಕಾ, ಶಿರಸಿಯ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ಸುಮನ್ ಹೆಗಡೆ ಮತ್ತು ಸಮಾಜ ಸೇವಕಿ ಗೌರಿ ನಾಯ್ಕ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಗಾಯಕಿ ದಿಯಾ ಹೆಗಡೆ ಅವರು ಗೀತೆಗಳನ್ನು ಹಾಡುವರು. ಬೆಟ್ಟಕೊಪ್ಪದ ತುಳಸಿ ಹೆಗಡೆ ಅವರು ಯಕ್ಷನೃತ್ಯ ಪ್ರದರ್ಶಿಸುವರು.

ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಡಾ. ಸಹನಾ ಭಟ್ ಮತ್ತು ತಂಡದವರು ಭರತನಾಟ್ಯ ಪ್ರಸ್ತುತಪಡಿಸುವರು. ಬಕ್ಕೆಮನೆಯ ಮಧುಮತಿ ಹೆಗಡೆ ಅವರು ಅಡುಗೆ ಕಾರ್ಯಕ್ರಮ ನಡೆಸಿಕೊಡುವರು. ಸಿಂಧು ಹೆಗಡೆ ಕಾರ್ಯಕ್ರಮ ನಿರ್ವಹಿಸುವರು.

ಈ ಕಾರ್ಯಕ್ರಮಕ್ಕೆ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಎಚ್‌ಸಿಜಿ ಆಸ್ಪತ್ರೆ ಮತ್ತು ಸುಚಿರಾಯು ಆಸ್ಪತ್ರೆಯ ಸಹಯೋಗವಿದೆ.

ಸ್ಥಳ: ಟಿಎಂಎಸ್ ಹಾಲ್, ಶಿರಸಿ

ದಿನಾಂಕ, ಸಮಯ: ಆಗಸ್ಟ್ 10, ಮಧ್ಯಾಹ್ನ 3.00

ಸಂಪರ್ಕ ದೂರವಾಣಿ ಸಂಖ್ಯೆ: 9449109148 ಅಥವಾ 9481048174.

ಡಾ. ಸುಮನ್ ಹೆಗಡೆ
ಡಾ. ಸುಮನ್ ಹೆಗಡೆ
ಗೌರಿ ನಾಯ್ಕ
ಗೌರಿ ನಾಯ್ಕ
ದಿಯಾ ಹೆಗಡೆ
ದಿಯಾ ಹೆಗಡೆ
ತುಳಸಿ ಹೆಗಡೆ
ತುಳಸಿ ಹೆಗಡೆ
ಭೂಮಿಕಾ ಕ್ಲಬ್ ಲೋಗೋ
ಭೂಮಿಕಾ ಕ್ಲಬ್ ಲೋಗೋ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT