ಶಿರಸಿ: ‘ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ವಿರೋಧಿಸಿ ಜುಲೈ 31ರಂದು ಮುಂಡಗೋಡಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ನಾಯ್ಕ ಹೇಳಿದರು.

ನಗರದ ದೀನ್ ದಯಾಳ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ‘ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಬಂದ ನಂತರ ರದ್ದು ಮಾಡಲಾಗಿದೆ. ಕೃಷಿ ಪಂಪ್ ಸೆಟ್ ಸಂಪರ್ಕಕ್ಕೆ ಈ ಹಿಂದೆ ₹25 ಸಾವಿರವಿದ್ದುದು ಈಗ ₹3 ಲಕ್ಷ ತಲುಪಿದೆ. ಬಿತ್ತನೆ ಬೀಜದ ದರ ಶೇ 20ರಷ್ಟು ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಬರ ಪರಿಹಾರವನ್ನು ಕಾಂಗ್ರೆಸ್ ಸರ್ಕಾರ ಈವರೆಗೆ ಫಲಾನುಭವಿಗಳಿಗೆ ನೀಡಿಲ್ಲ. ರೈತ ಆತ್ಮಹತ್ಯೆ ಪ್ರಕರಣ ಹೆಚ್ಚಿವೆ, ಪರಿಹಾರವೂ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

‘ಭೂ ಪರಿಹಾರ ಯೋಜನೆ ಸ್ಥಗಿತವಾಗಿದೆ. ಹಾಲಿನ ಪ್ರೋತ್ಸಾಹಧನ ಬಿಡುಗಡೆ ಅಸಮರ್ಪಕವಾಗಿದೆ. ಯೂರಿಯಾ ಗೊಬ್ಬರದ ಕೊರತೆ ಎದುರಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರ ಮೇಲೆ ಲಾಠಿ ಪ್ರಹಾರ ನಡೆದಿದೆ. ಸಂಧ್ಯಾ ಸುರಕ್ಷಾ ಯೋಜನೆ ಸ್ಥಗಿತ ಮಾಡುವ ಜತೆ ಗೋಮಾಳ, ಕಂದಾಯ ಪಡಾ ಭೂಮಿ ವಶಪಡಿಸುವ ಹುನ್ನಾರ ನಡೆದಿದೆ. ಫಾರ್ಮ್ 9 ಹಾಗೂ 11 ಪಡೆಯಲು ಸಮಸ್ಯೆ ಹೆಚ್ಚಿದೆ. ರಾಜ್ಯ ಸರ್ಕಾರದಿಂದ ಆಶ್ರಯಮನೆ ಮಂಜೂರಾಗಿಲ್ಲ. ಕೇಂದ್ರದಿಂದ ಮಂಜೂರಾದ ಮನೆಗಳನ್ನು ನಿರ್ಮಿಸಲು ಪಿಡಿಒ ಮೂಲಕ ಸಮಸ್ಯೆ ಮಾಡಲಾಗುತ್ತಿದೆ. ಈ ಎಲ್ಲ ವೈಫಲ್ಯ ಖಂಡಿಸಿ ಜುಲೈ 31 ರಂದು ಮುಂಡಗೋಡದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹರ್ತೆಬೈಲ್ ಮಾತನಾಡಿ, ‘ಸಂಸದರ ಬಗ್ಗೆ ಅವಹೇಳನ ಮಾಡುವುದು ತಪ್ಪು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಮಾತಿನ ಮೇಲೆ ಹಿಡಿತ ಸಾಧಿಸಲಿ. ಸರ್ಕಾರದ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಬಿಜೆಪಿಯತ್ತ ಬೊಟ್ಟು ಮಾಡುತ್ತಿದೆ’ ಎಂದು ದೂರಿದರು.

ಪಕ್ಷದ ಪದಾಧಿಕಾರಿಗಳಾದ ಶಿವಾಜಿ ನರಸಾನಿ, ಶಿವಲಿಂಗಯ್ಯ, ಶ್ರೀರಾಮ ನಾಯ್ಕ, ರವಿಚಂದ್ರ ಶೆಟ್ಟಿ, ಆನಂದ ಸಾಲೇರ ಇದ್ದರು.

ಹೆದ್ದಾರಿ ವಿಸ್ತರಣೆಗೆ ಭೂಸ್ವಾಧೀನ ನಡೆಸಿಕೊಡುವುದು ರಾಜ್ಯ ಸರ್ಕಾರದ ಕೆಲಸ. ಅದನ್ನು ಸ್ಥಳೀಯ ಅಧಿಕಾರಿಗಳು ಮಾಡುವ ಅಗತ್ಯವಿದೆ.
–ಗುರುಪ್ರಸಾದ ಹರ್ತೆಬೈಲ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.