ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇರಳವಾಗಿ ಬಲೆಗೆ ಬಿದ್ದ ‘ಕಾರ್ಗಿಲ್’ ಮೀನು: ಮೀನುಗಾರರಲ್ಲಿ ಆತಂಕ

‘ಮತ್ಸ್ಯ ಬರಗಾಲ’ದ ಸೂಚನೆ
Last Updated 4 ಅಕ್ಟೋಬರ್ 2019, 11:34 IST
ಅಕ್ಷರ ಗಾತ್ರ

ಕಾರವಾರ: ಮೀನುಗಾರಿಕೆಗೆ ಇಲ್ಲಿನ ಬೈತಖೋಲ್‌ ಬಂದರಿನಿಂದ ತೆರಳಿದ್ದ ಸುಮಾರು 15 ದೋಣಿಗಳಿಗೆ, ತಿನ್ನಲು ಯೋಗ್ಯವಲ್ಲದ ‘ಕಾರ್ಗಿಲ್’ (ಕಡಬು) ಮೀನು ಹೇರಳವಾಗಿ ಬಲೆಗೆ ಬಿದ್ದಿವೆ.

ಪ್ರತಿ ದೋಣಿಯಲ್ಲಿಐದರಿಂದಆರು ಟನ್‌ಗಳಷ್ಟು ಮೀನು ಸಿಕ್ಕಿದೆ.ಇದು ವಿಪರೀತ ವಾಸನೆಹೊಂದಿದ್ದು, ಕಪ್ಪು ಬಣ್ಣದ್ದಾಗಿದೆ. ಈ ಮೀನುಗಳನ್ನು ಬೇರೆ ಮೀನುಗಳ ಜೊತೆಗೆ ಸೇರಿಸಿ ತಂದರೆ, ಬೇರೆ ಮೀನುಗಳ ಬಣ್ಣ ಹಾಗೂ ರುಚಿ ಕಳೆದುಕೊಳ್ಳುತ್ತವೆ.ದುಬಾರಿ ಡೀಸೆಲ್‌ ವೆಚ್ಚ ಮಾಡಿಕೊಂಡು ಮೀನುಗಾರಿಕೆಗೆ ಹೋದವರು, ಖಾಲಿ ದೋಣಿಯಲ್ಲಿ ವಾಪಸ್ ಬರಬಾರದೆಂದು ಬಲೆಗೆ ಸಿಕ್ಕ ಈ ಮೀನನ್ನು ಜತೆಗೆಬಂದರಿಗೆ ತಂದಿದ್ದಾರೆ.

ಫಿಶ್‌ಮಿಲ್‌ಗೆ ಸಾಗಾಟ: ‘ಈ ಮೀನನ್ನು ಯಾರೂ ತಿನ್ನುವುದಿಲ್ಲ. ಹೀಗಾಗಿ ಇವುಗಳನ್ನು ಫಿಶ್‌ಮಿಲ್‌ಗೆ ಕಳುಹಿಸಿಕೊಡಲಾಗುತ್ತದೆ. ನಮ್ಮಲ್ಲಿ ಫಿಶ್‌ಮಿಲ್‌ ಇಲ್ಲದ ಕಾರಣ, ಉಡುಪಿ,ಕುಂದಾಪುರ, ಗೋವಾದ ಕಾನಕೋಣ, ಮಹಾರಾಷ್ಟ್ರದ ರತ್ನಗಿರಿಗೆಸಾಗಾಟ ಮಾಡುತ್ತೇವೆ. ಅಲ್ಲಿಯೂ ಹೆಚ್ಚಿನ ದರವಿರುವುದಿಲ್ಲ. ಕಿಲೋಗೆ ₹ 10ರಿಂದ ₹ 15ರಷ್ಟು ಇದ್ದು, ನಷ್ಟದಲ್ಲಿರುವ ಮೀನುಗಾರರಿಗೆ ಸದ್ಯ ಇದೇ ಆದಾಯವಾಗಿದೆ’ ಎನ್ನುತ್ತಾರೆ ಮೀನುಗಾರ ವಿನಾಯಕ ಹರಿಕಂತ್ರ.

‘ಎರಡು ವರ್ಷಗಳ ಹಿಂದೆ ಈ ಮೀನು ಇಲ್ಲಿನ ಮೀನುಗಾರರಿಗೆ ದೊರೆತಿತ್ತು. ಆದರೆ, ಇಷ್ಟು ಪ್ರಮಾಣದಲ್ಲಿ ಸಿಕ್ಕಿರಲಿಲ್ಲ. ಈ ಬಾರಿ ಒಟ್ಟು 80 ಟನ್‌ನಷ್ಟು ಬೈತಖೋಲ್‌ ಬಂದರಿಗೆ ಬಂದಿದೆ.ಇದು ಈ ವರ್ಷ ಮೀನುಗಾರಿಕೆಗೆ ಹಿನ್ನಡೆಯ ಸೂಚನೆ’ಎಂಬ ಆತಂಕ ಅವರದ್ದು.

ಮೀನುಗಳು ದೊರೆಯದಿರಲು ಕಾರಣವೇ ಇವು: ‘ಕಾರ್ಗಿಲ್’ ಮೀನು ಹೆಚ್ಚಾಗಿ ಹವಳದ ದಿಬ್ಬಗಳು ಇರುವಲ್ಲಿ, ಲಕ್ಷದ್ವೀಪದಂಥ ಪ್ರದೇಶಗಳಲ್ಲಿ ಇರುತ್ತವೆ. ಕಳೆದ ತಿಂಗಳು ಮುಂಬೈನಲ್ಲಿ ಈ ಮೀನು ಅಪಾರ ಪ್ರಮಾಣದಲ್ಲಿ ಮೀನುಗಾರರಿಗೆ ದೊರೆತಿತ್ತು ಎನ್ನುತ್ತಾರೆ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ.

ಅದನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ, ಸಮುದ್ರದಲ್ಲಿ ನೀರಿನ ಚಲನೆ ಬದಲಾಗುತ್ತಿದೆ. ಹೀಗಾಗಿ ಈ ಮೀನು ಹಿಂಡು ಹಿಂಡಾಗಿ ಉತ್ತರ ದಿಕ್ಕಿನಲ್ಲಿ ಚಲಿಸುತ್ತಿವೆ.ಇವುಗಳಿಗೆ ಮನುಷ್ಯರಂತೆ ಹಲ್ಲುಗಳಿದ್ದು,ಇತರಮೀನುಗಳನ್ನು ತಿನ್ನುತ್ತವೆ.ಇದರಿಂದ ಮೀನುಗಾರಿಕೆಗೆ ಹಿನ್ನಡೆಉಂಟಾಗುತ್ತದೆ. ಸೌಂದಳೆ ಹಾಗೂ ಬಂಗುಡೆಯಂಥ ಮೀನುಗಳು ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯದಿರುವುದಕ್ಕೆ ಕಾರಣವೇ ಈ ಮೀನುಗಳು ಎಂದು ಮಾಹಿತಿ ನೀಡಿದರು.

ಚೀನಾದಲ್ಲಿ ಬೇಡಿಕೆ: ‘ಕಾರ್ಗಿಲ್’ ಮೀನಿಗೆ ಚೀನಾದಲ್ಲಿ ವಿಶೇಷ ಬೇಡಿಕೆ ಇದೆ. ಫಿಶ್‌ಮಿಲ್‌ನಲ್ಲಿ ಮೀನಿನಕುತ್ತಿಗೆ ಭಾಗವನ್ನು ಬೇರ್ಪಡಿಸಿ, ಉಳಿದ ಭಾಗವನ್ನುಚೀನಾಗೆ ರಫ್ತು ಮಾಡುತ್ತಾರೆ. ರಫ್ತು ಮಾಡುವಾಗ ₹ 30ರಿಂದ ₹ 50ರವರೆಗೆ ದರ ಇರುತ್ತದೆ ಎನ್ನುತ್ತಾರೆ ಮೀನುಗಾರರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT