ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ | ಬಂಡೆಕಲ್ಲಿಗೆ ಬಡಿದು ಪರ್ಸಿನ್ ಬೋಟ್ ಮುಳುಗಡೆ:17 ಜನರ ರಕ್ಷಣೆ

Last Updated 20 ಜನವರಿ 2023, 17:07 IST
ಅಕ್ಷರ ಗಾತ್ರ

ಗೋಕರ್ಣ: ಕುಮಟಾ ಸಮೀಪದ ಕಡ್ಲೆ ಬಳಿ ಬಂಡೆಕಲ್ಲಿಗೆ ಬಡಿದು ನಿಯಂತ್ರಣ ತಪ್ಪಿದ ಪರಿಣಾಮ ಶುಕ್ರವಾರ ಪರ್ಸಿನ್ ಬೋಟ್ ಮುಳುಗಿದೆ. ಅದರಲ್ಲಿದ್ದ 17 ಮಂದಿಯನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಳ್ಳಂಬಾರದ ಸುಧಾಕರ ಖಾರ್ವಿ ಒಡೆತನ ಶ್ರೀದೇವಿ ಅನುಗ್ರಹ ಹೆಸರಿನ ಬೋಟ್ ಮುಳುಗಿದೆ. ಮೀನುಗಾರಿಕೆಗೆ ತೆರಳಿದ್ದ ಕಾರ್ಮಿಕರು ಮರಳಿ ಬರುವ ವೇಳೆ ದುರ್ಘಟನೆ ಸಂಭವಿಸಿತ್ತು.

ಕರಾವಳಿ ಪಡೆ ಕುಮಟಾ ಠಾಣೆಯ ಗಣಪತಿ ನಾಯಕ, ಶ್ರೀನಿವಾಸ್ ದುರ್ಗೇಕರ್, ಸಂತೋಷ ಹರಿಕಂತ್ರ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT