ಕುಮಟಾ: ‘ತುಂಡಾದ ಭಾರತಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಆದ್ದರಿಂದ ನಾವು ಉಸಿರಾಡಿ ಬದುಕನ್ನು ಆನಂದಿಸುವ ಈ ದೇಶದ ಸಮಗ್ರತೆ, ಏಕತೆಗೆ ಎಂದೆಂದೂ ಧಕ್ಕೆ ಬರದಂತೆ ನೋಡಿಕೊಳ್ಳಬೇಕಾಗಿರುವುದು ಬಹುಮುಖ್ಯವಾಗಿದೆ' ಎಂದು ದಿಗಂಬರ ಜೈನ ಮಠದ ಪ್ರಸಂಗ ಸಾಗರ ಮಹಾರಾಜರು ಹೇಳಿದರು.

ಪಟ್ಟಣದ ಮಹಾತ್ಮ ಗಾಂಧಿ ಮೈದಾನದಲ್ಲಿ ಯುಗಾದಿ ಉತ್ಸವ ಸಮಿತಿ ಭಾನುವಾರ ಆಯೋಜಿಸಿದ್ದ 17ನೇ ವರ್ಷದ ಯುಗಾದಿ ಉತ್ಸವ ಕಾರ್ಯಕ್ರದಲ್ಲಿ ಅವರು ಆಶೀರ್ವಚನ ನೀಡಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಗದಗ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ‘ಪ್ರಕೃತಿ ತಿಳಿಸುವ ಯುಗಾದಿ ನಮಗೆಲ್ಲ ಹೊಸ ವರ್ಷವಾಗಿದೆ’ ಎಂದರು.

ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಡಾ. ಸುರೇಶ ಹೆಗಡೆ ಸ್ವಾಗತಿಸಿದರು. ಸಂಚಾಲಕ ಮುರಳೀಧರ ಪ್ರಭು ಪ್ರಾಸ್ತಾವಿಕ ಮಾತನ್ನಾಡಿದರು. ಡಾ.ಗೋಪಾಲಕೃಷ್ಣ ಹೆಗಡೆ ಪಂಚಾಂಗ ಪಠಿಸಿದರು. ಬಿ.ಎನ್.ಕೆ ನಾಗರಾಜ ದಂಪತಿ ಸಭಾಪೂಜೆ ನೆರವೇರಿಸಿದರು. ಸಮಿತಿ ಪದಾಧಿಕಾರಿಗಳಾದ ಆನಂದು ನಾಯಕ, ಎಸ್.ಜಿ. ನಾಯ್ಕ, ಜಿ.ಎಸ್.ಹೆಗಡೆ, ಶಾಸಕ ದಿನಕರ ಶೆಟ್ಟಿ, ಡಾ. ಜಿ.ಜಿ. ಹೆಗಡೆ, ಸೂರಜ ನಾಯ್ಕ ಇದ್ದರು. ಪಟ್ಟಣದ ಬೀದಿಯಲ್ಲಿ ವಿವಿಧ ಧಾರ್ಮಿಕ ಸ್ತಬ್ಧ ಚಿತ್ರಗಳನ್ನೊಗೊಳಗೊಂಡ ಶೋಭಾ ಯಾತ್ರೆ ನಡೆಯಿತು. ನಂತರ ಎಲ್ಲರಿಗೂ ಬೇವು-ಬೆಲ್ಲ ಹಂಚಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.