ಕಾರವಾರ: ಗುಡ್ಡಗಾಡು ಪ್ರದೇಶವೇ ಹೆಚ್ಚಿರುವ ಜಿಲ್ಲೆಯಲ್ಲಿ ಕರ ಸಂಗ್ರಹಣೆಗೆ ಪರದಾಡುತ್ತಿದ್ದ ಗ್ರಾಮ ಪಂಚಾಯಿತಿಗಳು ಈ ಬಾರಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿವೆ. ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯು ಹಮ್ಮಿಕೊಂಡಿರುವ ‘ಕರ ಸಂಗ್ರಹಣೆಯ ವಿಶೇಷ ಅಭಿಯಾನ’ ಇದಕ್ಕೆ ನೆರವಾಗಿದೆ ಎಂದು ಅಧಿಕಾರಿಗಳ ವಿಶ್ಲೇಷಣೆ.

229 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಪ್ರತಿ ವರ್ಷ ಕರ ಸಂಗ್ರಹಣೆ ನಿರೀಕ್ಷಿತ ಪ್ರಗತಿ ಸಾಧಿಸುತ್ತಿಲ್ಲ ಎಂಬ ಕೊರಗು ಹಿಂದಿನಿಂದಲೂ ಇತ್ತು. ಈ ಬಾರಿ 2024–25ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಎರಡೂವರೆ ತಿಂಗಳು ಬಾಕಿ ಇರುವಾಗಲೇ ಒಟ್ಟು ಬೇಡಿಕೆಯ ಶೇ 83ರಷ್ಟು ಕರ ಸಂಗ್ರಹಣೆ ಮಾಡಲಾಗಿದೆ.

‘ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಗಳ ತೆರಿಗೆ ಸಂಗ್ರಹ ಪ್ರಮಾಣ ಶೇ 50 ದಾಟಲು ಕಷ್ಟವಾಗುತ್ತಿದೆ. ಅರಣ್ಯ ಭೂಮಿ, ಗುಡ್ಡಗಾಡು ಪ್ರದೇಶಗಳೇ ಹೆಚ್ಚಿರುವ ಹಾಗೂ ಭೌಗೋಳಿಕವಾಗಿ ವಿಸ್ತಾರವಾಗಿರುವ ಜಿಲ್ಲೆಯಲ್ಲಿ ಶೇ 83ರಷ್ಟು ಕರ ಸಂಗ್ರಹಣೆ ಮಾಡಿರುವುದು ರಾಜ್ಯದಲ್ಲೇ ವಿನೂತನ ಸಾಧನೆ’ ಎಂದು ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಂದ 2024–25ನೇ ಸಾಲಿಗೆ ₹17.94 ಕೋಟಿಯಷ್ಟು ಕರ ಸಂಗ್ರಹಣೆಯ ಬೇಡಿಕೆ ಇದೆ. ಕಳೆದ ವರ್ಷದ ಬಾಕಿಯೂ ಸೇರಿ ₹23.53 ಕೋಟಿ ವಸೂಲು ಮಾಡಬೇಕಾಗಿದೆ. ಅವುಗಳ ಪೈಕಿ ಪ್ರಸಕ್ತ ಸಾಲಿನ ಬೇಡಿಕೆಯ ಶೇ 83ರಷ್ಟು ಮತ್ತು ಒಟ್ಟು ಬೇಡಿಕೆಯ ಶೇ 64ರಷ್ಟು ಕರ ಸಂಗ್ರಹ ಮಾಡಲಾಗಿದೆ.

‘ಪ್ರತಿ ವರ್ಷ ಗ್ರಾಮ ಪಂಚಾಯಿತಿಗಳಲ್ಲಿ ಕರ ಸಂಗ್ರಹಣೆ ಪ್ರಮಾಣ ನಿರೀಕ್ಷಿತ ಗುರಿ ತಲುಪುತ್ತಿರಲಿಲ್ಲ. ಈ ಬಾರಿ ಕರ ಸಂಗ್ರಹಣೆಯ ಗುರಿ ಹೆಚ್ಚಿಸಬೇಕು ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ನಿರ್ದೇಶನ ಆಧರಿಸಿ ಪಿಡಿಒ, ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರತಿ ವಾರಕ್ಕೊಮ್ಮೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಕರ ಸಂಗ್ರಹದ ಪ್ರಗತಿ ಕುರಿತು ಮಾಹಿತಿ ಪಡೆಯಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಹೇಳಿದರು.

‘ತಿಂಗಳಿಗೊಮ್ಮೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಕರ ಸಂಗ್ರಹಣೆಗೆ ವಿಶೇಷ ಅಭಿಯಾನ ನಡೆಸಿ, ಕರ ವಸೂಲಾತಿ ನಡೆಸುವಂತೆ ಸೂಚಿಸಲಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸರಾಸರಿ ಎರಡು ಅಥವಾ ಮೂರು ಅಭಿಯಾನ ನಡೆದಿದೆ. ಈ ಮೂಲಕವೂ ಕರ ಸಂಗ್ರಹಣೆ ಪ್ರಮಾಣ ಗಣನೀಯ ಏರಿಕೆ ಕಂಡಿದೆ’ ಎಂದೂ ಹೇಳಿದರು.

ಪ್ರತಿ ತಿಂಗಳಿಗೊಮ್ಮೆ ವಿಶೇಷ ಅಭಿಯಾನ ಸರಾಸರಿ 2–3 ಅಭಿಯಾನ ನಡೆಸಿದ ಗ್ರಾ.ಪಂಗಳು ₹23.53 ಕೋಟಿ ವಸೂಲಾತಿಯ ಗುರಿ

ಆರ್ಥಿಕ ವರ್ಷದ ಅಂತ್ಯದೊಳಗೆ ಒಟ್ಟೂ ಕರ ಸಂಗ್ರಹದ ಗುರಿ ಪ್ರಗತಿಶತ ಸಾಧನೆ ತಲುಪಿಸಲು ಶ್ರಮಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ
ಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.