ಏನಿದು ತೇಲುವ ಕಾಂಕ್ರೀಟ್ ಜಟ್ಟಿ?
‘ನದಿ ಅಥವಾ ಸಮುದ್ರದಲ್ಲಿ ದೋಣಿಗಳ ನಿಲುಗಡೆಗೆ ಅನುಕೂಲವಾಗುವಂತೆ ತಾತ್ಕಾಲಿಕ ಜಟ್ಟಿ ಸ್ಥಾಪಿಸಲು ಈ ಮೊದಲು ಅಧಿಕ ಸಾಂಧ್ರತೆಯ ಪಾಲಿಥಿನ್ (ಎಚ್‌ಡಿಪಿಇ) ಬಳಸಲಾಗುತ್ತಿತ್ತು. ಕಾಂಕ್ರೀಟ್ ಜಟ್ಟಿ ವಿಭಿನ್ನವಾದದ್ದು. ರಬ್ಬರ್ ತಳಹದಿಗೆ ಕಾಂಕ್ರೀಟ್ ಅಳವಡಿಸಿ ಸಮತಟ್ಟಾದ ಆಯತಾಕಾರದ ನೆಲಹಾಸು ರಚಿಸಲಾಗುತ್ತದೆ. ಅವುಗಳಿಗೆ ನಾಲ್ಕೂ ಕಡೆ ಆ್ಯಂಕರ್ ಜೋಡಿಸಿ ನೀರಿನಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಅಳವಡಿಸಲಾಗುತ್ತದೆ. ನೀರಿನ ಉಬ್ಬರ ಇಳಿತಕ್ಕೆ ತಕ್ಕಂತೆ ಅವೂ ಕೂಡ ಚಲನೆಯಾಗುತ್ತವೆ. ಇವು ದೋಣಿ ನಿಲುಗಡೆಗೆ ಅನುಕೂಲವಾಗುತ್ತವೆ’ ಎಂದು ಬಂದರು ಎಂಜಿನಿಯರ್ ಪಾಂಡುರಂಗ ಕುಲಕರ್ಣಿ ವಿವರಿಸಿದರು.