ದಾಂಡೇಲಿ: ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶದಲ್ಲಿ ಮೊಸಳೆಗಳ ದಾಳಿಯನ್ನು ನಿಯಂತ್ರಿಸಲು ಹಾಗೂ ಜನರ ಸುರಕ್ಷತೆ ದೃಷ್ಟಿಯಿಂದ ನದಿಯ ದಡಕ್ಕೆ ಅಳವಡಿಸಲಾದ ತಡೆ ಬೇಲಿ ದಾಟಿ ನದಿ ಗಿಳಿಯುವ ಮೆಟ್ಟಿಲಲ್ಲಿ ಬುಧವಾರ ಪ್ರತ್ಯಕ್ಷವಾಗಿದ್ದ ಬೃಹತ್ ಗಾತ್ರದ ಮೊಸಳೆಯನ್ನು ಅರಣ್ಯ ಇಲಾಖೆಯ ರಕ್ಷಣಾ ತಂಡ ಹಾಗೂ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಸುರಕ್ಷಿತವಾಗಿ ನದಿಗೆ ಬಿಟ್ಟಿದ್ದಾರೆ.

ನಗರದಲ್ಲಿ ಮೊಸಳೆ ದಾಳಿಯಿಂದ ನಾಲೈದು ಜನ ಮೃತಪಟ್ಟ ಹಿನ್ನೆಲೆಯಲ್ಲಿ, ಜನರ
ಸುರಕ್ಷತೆ ದೃಷ್ಟಿಯಿಂದ ಅಲ್ಲಲ್ಲಿ ತಡೆ ಬೇಲಿ ನಿರ್ಮಿಸಲಾಗಿದೆ. ಜನರು ಬಟ್ಟೆ ತೊಳೆಯಲೆಂದು ಹೋಗುವ ಸ್ಥಳಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ತಕ್ಷಣವೇ ಸ್ಥಳೀಯರು ನಗರಸಭೆ ಸದಸ್ಯೆ ಸರಸ್ವತಿ ರಜಪೂತ ಅವರಿಗೆ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸಂದೀಪ ನಾಯ್ಕ, ಹನುಮಂತ ಆಲದಗಿಡದ, ಸಿಬ್ಬಂದಿ ಸಂದೀಪ ಗೌಡ, ಸವಿತಾ ಬನ್ನೂರ, ರಫೀಕ್ ಕಿತ್ತೂರು, ಚಂದ್ರಕಾಂತ ಮಿರಾಶಿ, ಅಜಯ ಹೋಂಡಾದಕಟ್ಟಿ , ಸುನೀಲ ಹಾಗೂ ಪೊಲೀಸ್ ಸಿಬ್ಬಂದಿ ಈರಣ್ಣಾ ವಗ್ಗೋಡಗಿ, ಶಿವಾನಂದ ಬಿಸಲನಾಯಕ, ಬಸವರಾಜ ತೇಲಸಂಗ, ಮುರಳಿಧರ ಕೆಳಗಿನಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.