ಮುಂಡಗೋಡ: ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.6ರ ಡ್ರೆಪುಂಗ್ ಗೋಮಾಂಗ್ ಬೌದ್ಧ ಮಂದಿರದಲ್ಲಿ ಕಳೆದ ಡಿ.12ರಿಂದ ವಾಸ್ತವ್ಯ ಹೂಡಿರುವ ಟಿಬೆಟಿಯನ್ ಧಾರ್ಮಿಕ ನಾಯಕ ದಲೈಲಾಮಾ ಅವರ ಆಶೀರ್ವಾದ ಪಡೆಯಲು ಬರುವವರ ಸಂಖ್ಯೆ ಏರಿಕೆಯಾಗಿದೆ.

ಈವರೆಗೆ ದಲೈಲಾಮಾ ನಾಲ್ಕೈದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ಇನ್ನುಳಿದ ದಿನಗಳಂದು ನಿತ್ಯವೂ ಸಂದರ್ಶಕರಿಗೆ ಆಶೀರ್ವಚನ ನೀಡುತ್ತಿದ್ದಾರೆ. ಪ್ರತಿದಿನ 300ರಿಂದ 350ರಷ್ಟು ಬೌದ್ಧ ಅನುಯಾಯಿಗಳಿಗೆ ಆಶೀರ್ವಚನ ನೀಡುತ್ತಿದ್ದಾರೆ. ದಿನಕಳೆದಂತೆ ಅವರನ್ನು ಭೇಟಿಯಾಗಲು ಬೇಡಿಕೆ ಇಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಟಿಬೆಟಿಯನ್ ಕ್ಯಾಂಪ್ನ ಬೌದ್ಧ ಮುಖಂಡರೊಬ್ಬರು ಹೇಳಿದ್ದಾರೆ.

‘ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ಅನುಮತಿ ಪಡೆದವರಿಗೆ ಮಾತ್ರ, ದಲೈಲಾಮಾ ಅವರನ್ನು ಭೇಟಿಯಾಗಲು ಅವಕಾಶವಿದೆ. ಆರಂಭದ ದಿನಗಳಲ್ಲಿ ಅರ್ಜಿ ಸಲ್ಲಿಸಿದ 2ರಿಂದ 3 ದಿನಗಳಲ್ಲಿಯೇ ಅನುಮತಿ ಸಿಗುತ್ತಿತ್ತು. ಆದರೆ, ಸಂದರ್ಶಕರ ಸಂಖ್ಯೆ ಹೆಚ್ಚಾಗತೊಡಗಿದ್ದರಿಂದ, ಅರ್ಜಿ ಸಲ್ಲಿಸಿ, ವಾರ ಕಳೆದರೂ ಅನುಮತಿ ಸಿಗುತ್ತಿಲ್ಲ’ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಲಡಾಖ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬೌದ್ಧ ಅನುಯಾಯಿಗಳು ಆಗಮಿಸಿ, ದಲೈಲಾಮಾ ಅವರ ಆಶೀರ್ವಾದ ಪಡೆದಿದ್ದಾರೆ. ಬೇರೆ ರಾಜ್ಯಗಳಿಂದ ಬರುವ ಬೌದ್ಧ ಅನುಯಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೇ, ಅಮೇರಿಕ, ರಷ್ಯಾ, ಮಂಗೋಲಿಯಾದಿಂದಲೂ ಬೌದ್ಧ ಅನುಯಾಯಿಗಳು ಆಗಮಿಸಿ, ದಲೈಲಾಮಾ ಅವರ ಆಶೀರ್ವಾದ ಪಡೆದಿದ್ದಾರೆ.

ಝಡ್ ಪ್ಲಸ್ ರಕ್ಷಣೆ ಹೊಂದಿರುವ ದಲೈಲಾಮಾ ಅವರು ವಾಸ್ತವ್ಯ ಹೂಡಿರುವ ಡ್ರೆಪುಂಗ್ ಗೋಮಾಂಗ್ ಬೌದ್ಧ ಮಂದಿರದ ಸುತ್ತಲೂ, ಸ್ಥಳೀಯ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಬಂದಿರುವ ಪೊಲೀಸರು ಬಂದೋಬಸ್ತ್ನಲ್ಲಿ ನಿರತರಾಗಿದ್ದಾರೆ. ಬೌದ್ಧ ಮಂದಿರದ ಒಳಗೆ, ಟಿಬೆಟಿಯನ್ ವಿಶೇಷ ತಂಡದ ಸದಸ್ಯರೂ, ರಕ್ಷಣೆಯ ಹೊಣೆ ಹೊತ್ತು, ಸಂದರ್ಶಕರನ್ನು ತೀವ್ರ ತಪಾಸಣೆ ಮಾಡಿದ ನಂತರವಷ್ಟೇ ಒಳಗೆ ಬಿಡುತ್ತಿದ್ದಾರೆ. ಬೌದ್ಧ ಮಂದಿರದ ಒಳಗೆ ಆಶೀರ್ವಾದ ಪಡೆಯಲು ತೆರಳುವ ಸಂದರ್ಶಕರಿಗೆ, ಹಿರಿಯ ಬಿಕ್ಕುಗಳು ಅಗತ್ಯ ಸೂಚನೆಗಳನ್ನು ನೀಡುತ್ತ ನೆರವಾಗುತ್ತಿದ್ದಾರೆ.

ದಲೈಲಾಮಾ ಅವರ ಆಶೀರ್ವಾದ ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಸಿಕ್ಕವರಿಗೆ ಮಾತ್ರ ಪ್ರವೇಶವಿದೆ. ಧರ್ಮಗುರುವನ್ನು ಸನಿಹದಿಂದ ನೋಡಿ ಅವರ ಆಶೀರ್ವಾದ ಪಡೆಯುತ್ತಿರುವ ಸಂತಸಗೊಳ್ಳುತ್ತಿದ್ದಾರೆ.
– ಜಂಪಾ ಲೋಬ್ಸಂಗ್, ಬೌದ್ಧ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.