ಕಾರವಾರ: ‘ಸೀಬರ್ಡ್ ನೌಕಾನೆಲೆಯ ವಿಸ್ತರಣೆ ಯೋಜನೆಯು ದೇಶದ ರಕ್ಷಣಾ ಕ್ಷೇತ್ರ ಬಲಪಡಿಸುವ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಆರ್ಥಿಕತೆ ಬಲಗೊಳ್ಳಲೂ ನೆರವಾಗಲಿದೆ’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದರು.

ಇಲ್ಲಿನ ಸೀಬರ್ಡ್ ನೌಕಾನೆಲೆಯಲ್ಲಿ ‘ಒಂದು ದೇಶ, ಒಂದು ಮಿಷನ್’ ಯೋಜನೆ ಅಡಿಯಲ್ಲಿ ಅಂದಾಜು ₹2 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹಡಗು ಕಟ್ಟೆಗಳು, ಶಸ್ತ್ರಾಸ್ತ್ರ ವಾರ್ಫ್, 480 ವಸತಿ ಗೃಹಗಳು, 25 ಕಿ.ಮೀ ಉದ್ದದ ರಸ್ತೆ, 12 ಕಿ.ಮೀ ಉದ್ದದ ಒಳಚರಂಡಿ ಹಾಗೂ ಇನ್ನಿತರ ಸೌಕರ್ಯಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನೌಕಾನೆಲೆಯ ವಿಸ್ತರಣೆ ಯೋಜನೆಗೆ ಶೇ 90 ರಷ್ಟು ದೇಶೀಯ ನಿರ್ಮಿತ ಸಾಮಗ್ರಿಗಳನ್ನು, ಕಚ್ಚಾವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ಆತ್ಮ ನಿರ್ಭರ ಭಾರತ ಯೋಜನೆ ಸಾಕಾರಗೊಳ್ಳಲು ನೌಕಾನೆಲೆ ವಿಸ್ತರಣೆ ಯೋಜನೆ ಬಲತುಂಬಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ವಿಚಾರದಲ್ಲಿಯೂ ಯೋಜನೆ ಪೂರಕವಾಗಿರಲಿದೆ’ ಎಂದರು.

‘ನೌಕಾಪಡೆಯನ್ನು ಬಲಿಷ್ಠಗೊಳಿಸಲಾಗುತ್ತಿದ್ದು, ಕೇವಲ ರಕ್ಷಣಾ ಕ್ಷೇತ್ರದಲ್ಲಿ ಬಲಗೊಳ್ಳುವುದಷ್ಟೆ ಗುರಿಯಲ್ಲ. ಬದಲಾಗಿ ಮಿತ್ರರಾಷ್ಟ್ರಗಳ ವಿಶ್ವಾಸ ಗಳಿಕೆಯೊಂದಿಗೆ ಭಾರತ ಸಹಿತ ಜಾಗತಿಕ ಶಾಂತಿ ಸ್ಥಾಪನೆಗೆ ಹೆಜ್ಜೆ ಇಡಲಿದ್ದೇವೆ. ನೌಕಾದಳದಲ್ಲಿ ಸುಧಾರಣೆಗಳಾಗಿದ್ದು ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ನೈಪುಣ್ಯಭರಿತ ನಾವಿಕರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಇವೆ’ ಎಂದರು.

‘ಭದ್ರತೆ, ಆರ್ಥಿಕ ಬೆಳವಣಿಗೆ, ಪರಸ್ಪರ ಸಮಗ್ರ ಪ್ರಗತಿ ವಿಚಾರದಲ್ಲಿ ಭಾರತೀಯ ನೌಕಾದಳವು ಮಿತ್ರರಾಷ್ಟ್ರಗಳೊಂದಿಗೆ ಸೇರಿ ಐಒಎಸ್ ಸಾಗರ ಗಸ್ತು ಚಟುವಟಿಕೆ ಆರಂಭಿಸಿದ್ದು, ಇದರಿಂದ ಸಮುದ್ರ ಮಾರ್ಗದಲ್ಲಿ ಭಾರತ ಗಣನೀಯ ಹಿಡಿತ ಸಾಧಿಸಲು ನೆರವಾಗಲಿದೆ’ ಎಂದರು.

ಎರಡನೇ ಹಂತದ ವಿಸ್ತರಣೆ ಯೋಜನೆಯ ಭಾಗವಾಗಿ ನಿರ್ಮಿಸಿರುವ ಸೌಕರ್ಯಗಳನ್ನು ಪರಿಶೀಲಿಸಿದ ಸಚಿವರು, ಐಎನ್ಎಸ್ ಸುನೈನಾ ಏರಿ, ಅದರಲ್ಲಿದ್ದ ಸಿಬ್ಬಂದಿಗಳ ಕುಶಲೋಪರಿ ವಿಚಾರಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚವ್ಹಾಣ್, ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್, ಇತರ ಹಿರಿಯ ಅಧಿಕಾರಿಗಳು ಇದ್ದರು.

ಸಂತ್ರಸ್ತರ ಸಮಸ್ಯೆ ಸಚಿವರಿಗೆ ಮನವರಿಕೆ

‘ಸೀಬರ್ಡ್ ನೌಕಾನೆಲೆ ಯೋಜನೆಗೆ ಭೂಮಿ ತ್ಯಾಗ ಮಾಡಿದ ಇಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ‘ನೌಕಾದಳದ ಉದ್ಯೋಗಾವಕಾಶದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡವ ಜೊತೆಗೆ ಹುದ್ದೆಗಳ ಭರ್ತಿಗೆ ನಡೆಸುವ ಲಿಖಿತ ಪರೀಕ್ಷೆಗಳಿಗೆ ಸ್ಥಳೀಯವಾಗಿ ಪರೀಕ್ಷಾ ಕೇಂದ್ರ ತೆರೆಯಬೇಕು ಇಲ್ಲಿನ ಯುವಕರಿಗೆ ಅಗತ್ಯ ತರಬೇತಿ ಒದಗಿಸಲು ಪೂರಕ ವ್ಯವಸ್ಥೆಗಳಾಗಬೇಕು ಎಂಬುದಾಗಿ ಮನವಿ ಮಾಡಲಾಗಿದೆ’ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ‘ದೇಶವು ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದು ರಕ್ಷಣಾ ಕ್ಷೇತ್ರದಲ್ಲಿಯೂ ಮಹತ್ತರ ಮೈಲಿಗಲ್ಲು ಸಾಧಿಸಿದೆ. ಐಒಎಸ್ ಸಾಗರ ಪರಿಕ್ರಮ ಇದಕ್ಕೆ ನಿದರ್ಶನವಾಗಿದೆ. ಕಳೆದ 11 ವರ್ಷಗಳಲ್ಲಿ ದೇಶದ ರಕ್ಷಣಾ ಕ್ಷೇತ್ರದ ಬಲ ಹೆಚ್ಚಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.