ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ | ತ್ವರಿತ ಕೆಲಸಗಳಿಗೆ ಇ-ಆಫೀಸ್‌ ಸಹಾಯಕ: ಶಾಸಕ ಶಿವರಾಮ ಹೆಬ್ಬಾರ್‌

Published : 16 ನವೆಂಬರ್ 2023, 13:27 IST
Last Updated : 16 ನವೆಂಬರ್ 2023, 13:27 IST
ಫಾಲೋ ಮಾಡಿ
Comments

ಮುಂಡಗೋಡ: ಸಾರ್ವಜನಿಕ ಅರ್ಜಿಗಳಿಗೆ ಬೇಗನೆ ಸ್ಪಂದಿಸಲು ಹಾಗೂ ತ್ವರಿತ ಕೆಲಸಗಳಿಗೆ ಇ-ಆಫೀಸ್‌ ನೆರವಾಗಲಿದ್ದು, ಸಿಬ್ಬಂದಿ ಕಾರ್ಯಕ್ಷಮತೆಯನ್ನು ಅಳೆಯಲೂ ಇದು ಸಹಾಯಕವಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.

ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಬುಧವಾರ ಇ-ಆಫೀಸ್‌ ಉದ್ಘಾಟಿಸಿ ಮಾತನಾಡಿದರು.

ತಹಶೀಲ್ದಾರ್‌ ಶಂಕರ ಗೌಡಿ ಮಾತನಾಡಿ, ಸಾರ್ವಜನಿಕರು ಹಾಗೂ ವಿವಿಧ ಕಚೇರಿಗಳಿಂದ ಬರುವ ಅರ್ಜಿ, ಪತ್ರಗಳನ್ನು ಅರ್ಜಿ ಸ್ವೀಕೃತಿ ಕೇಂದ್ರದಲ್ಲಿ(ಟಪಾಲು ವಿಭಾಗ) ಇ- ಆಫೀಸ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ಕಳಿಸಲಾಗುತ್ತದೆ. ನಂತರ ಇ-ಆಫೀಸ್ ಮೂಲಕವೇ ಶಿರಸ್ತೇದಾರ್‌ ಹಾಗೂ ತಹಶೀಲ್ದಾರ್‌ಗೆ ಬರುತ್ತದೆ. ಅನುಮೋದನೆ ಆದ ನಂತರ ಕಡತವು ಇ-ಆಫೀಸ್ ಮೂಲಕವೇ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರ ಕಚೇರಿಗೆ ಹೋಗುತ್ತದೆ. ಸಂಬಂಧಿಸಿದ ಅರ್ಜಿದಾರರಿಗೆ ಅನುಮೋದನೆಯಾದ ಪತ್ರ ಅಥವಾ ಆದೇಶವನ್ನು ಮುದ್ರಿಸಿ ಕಳಿಸಲಾಗುವುದು’ ಎಂದರು.

‘ಇದರಿಂದ ಸಮಯದ ಉಳಿತಾಯದೊಂದಿಗೆ ಕಾಗದ ರಹಿತ ಹಾಗೂ ಭೌತಿಕ ಕಡತಗಳ ಉಪಯೋಗ ಕಡಿಮೆಯಾಗುತ್ತದೆ. ಅರ್ಜಿಯ ಇ-ಸಂಖ್ಯೆಯ ಮೂಲಕವೇ ಸಂಬಂಧಿಸಿದ ಫೈಲ್ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಮೇಲಧಿಕಾರಿಗಳಿಗೆ ಪತ್ರಗಳನ್ನು ಅಥವಾ ಕಡತಗಳನ್ನು ಕಳಿಸುವ ಅಗತ್ಯವಿಲ್ಲ. ಮುಗಿದು ಹೋದ ದಾಖಲೆಗಳನ್ನು ಸಹ ಸುಲಭವಾಗಿ ಇ-ಆಫೀಸ್ ಮೂಲಕ ಪಡೆಯಬಹುದು’ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ರವಿಗೌಡ ಪಾಟೀಲ, ಎಲ್‌.ಟಿ.ಪಾಟೀಲ, ಗುಡ್ಡಪ್ಪ ಕಾತೂರ, ದೇವು ಪಾಟೀಲ, ಸಿದ್ಧಪ್ಪ ಹಡಪದ, ಡಿ.ಎಫ್‌.ಮಡ್ಲಿ, ಕೆಂಜೋಡಿ ಗಲಭಿ, ಪಿ.ಜಿ.ತಂಗಚ್ಚನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT