ಭಟ್ಕಳ: ಸಾಮಾಜಿನ ಜಾಲತಾಣದಲ್ಲಿ (ಫೇಸ್ಬುಕ್) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮುಜುಗರವನ್ನುಂಟು ಮಾಡಲು ಸುಳ್ಳು ಮಾಹಿತಿಯನ್ನು ಶೇರ್ ಮಾಡಿದ ಇಬ್ಬರನ್ನು ಮುರುಡೇಶ್ವರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಮುರುಡೇಶ್ವರ ನಿವಾಸಿ ನಾಗಪ್ಪ ಸುಬ್ರಾಯ ನಾಯ್ಕ ದೂರು ನೀಡಿದ್ದರು. ದೂರಿನಲ್ಲಿ ‘ಭಟ್ಕಳಕ್ಕೆ ಬದಲಾವಣೆ’ ಎಂಬ ಪೇಸ್ ಬುಕ್ ಖಾತೆದಾರನು ತನ್ನ ಪೇಸಬುಕ್ ಖಾತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವಮಾನ ಆಗುವ ರೀತಿಯಲ್ಲಿ ವಿಡಿಯೊವನ್ನು ಹರಿಬಿಟ್ಟು ಜನರಿಗೆ ತಪ್ಪು ಸಂದೇಶ ತಲುಪಿಸಿ ಸಚಿವರಿಗೆ ಮುಜುಗರ ಉಂಟು ಮಾಡಿದ್ದಾನೆ ಎಂದು ಉಲ್ಲೇಖಿಸಿದ್ದರು.

ಭಟ್ಕಳಕ್ಕೆ ಬದಲಾವಣೆ ಎಂಬ ಹೆಸರಿನ ಪೇಸ್ಬುಕ್ ಖಾತೆದಾರ ಭಾಸ್ಕರ ದೇವಾಡಿಗ, ನಾಗರಾಜ ಎಂ. ನಾಯ್ಕ ಹಿಂದು, ತೇಜು ನಾಯ್ಕ ಹೊನ್ನಾವರ ಎನ್ನುವ ಖಾತೆದಾರರು ಶೇರ್ ಮಾಡಿದ್ದು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡ ಮುರುಡೇಶ್ವರ ಪೊಲೀಸರು ನಾಗರಾಜ ಮಾದೇವ ನಾಯ್ಕ, ಭಾಸ್ಕರ ನಾರಾಯಣ ದೇವಾಡಿಗ ಅವರನ್ನು ಬಂಧಿಸಿದ್ದು ಇನ್ನೋರ್ವನಿಗಾಗಿ ಶೋಧ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.