ಶಿರಸಿ: ’ಅಪ್ಪ ನನಗೆ ಸುಪರ್ ಹೀರೊ! ಹೇಳಿದ್ದನ್ನು ಕೊಡುವುದು ಅಥವಾ ಕೊಡಿಸುವುದಕ್ಕಿಂತ ಅವಕೊಡುವ ಜ್ಞಾನ, ಸಲಹೆ ಅದಕ್ಕಿಂತ ಮಿಗಿಲಾದುದು ಪ್ರೀತಿ. ಎಳೆಯ ವಯಸ್ಸಿನಿಂದ ಇಲ್ಲಿಯವರೆಗೂ ನಮ್ಮಿಬ್ಬರ ನಡುವಿನ ಸ್ನೇಹವನ್ನು ಬರಹದಲ್ಲಿ ಹೇಳಲಾಗದು’ ಎಂದು ಅನುಭವ ಬಿಚ್ಚಿಟ್ಟರು ಎಂಬಿಎ ವಿದ್ಯಾರ್ಥಿನಿ ಎಂ.ಆರ್.ಇಳಾ.

ಕತೆಗಾರ, ಕವಿ ಪ್ರೊ. ರಾಜು ಹೆಗಡೆ ಅವರ ಪುತ್ರಿ ಇಳಾ ಅಪ್ಪನೊಂದಿಗಿನ ಅನುಭವ ಹಂಚಿಕೊಂಡಿದ್ದು ಹೀಗೆ– ‘ನಮ್ಮಿಬ್ಬರಲ್ಲಿ ಅದಷ್ಟೋ ಸಿಕ್ರೆಟ್‌ಗಳು, ಮೋಜಿನ ಮಾತು, ಬೈಸಿಕೊಂಡಿದ್ದು, ಭಿನ್ನಾಭಿಪ್ರಾಯ ಎಲ್ಲವೂ ಒಂದೊಂದು ಬಗೆಯದು. ಇದರ ಜೊತೆಗೆ ಜೀವನದ ಪ್ರತಿ ಹಂತದಲ್ಲೂ ಮೇಲೆ ಬರುವುದರ ಬಗ್ಗೆ ಸಲಹೆ, ಅವನ ಜೊತೆಗಿನ ಚರ್ಚೆ ಅಮೂಲ್ಯವಾದದ್ದು.’

‘ನನಗೆ ಸ್ವಂತ ಅಣ್ಣತಮ್ಮಂದಿರಿಲ್ಲ. ಆದರೆ, ಆ ಪ್ರೀತಿಯ ಕೊರತೆಯನ್ನು ಪಪ್ಪ ಹೋಗಲಾಡಿಸಿದ್ದಾನೆ. ಹೀಗಾಗಿ ನನಗೆ ’ಪಪ್ಪ ಪಪ್ಪ ಎಂದು’ ಇಡೀ ದಿನ ಕೂಗಬೇಕೆನಿಸುತ್ತದೆ. ಅವನೊಂದಿಗೆ ಹೊರಗಿನ ಸುತ್ತಾಟ ಬೇರೆಯದೇ ಅನುಭವ. ಏನೇ ಆಗಲಿ, ತನಗೆ ಎಷ್ಟೇ ಕಷ್ಟವಿರಲಿ ಸಹನೆಯಿಂದ ಸ್ಪಂದಿಸುವ ರೀತಿಯನ್ನು ಅಪ್ಪನಲ್ಲೇ ವಿಶೇಷವಾಗಿ ಕಂಡಿದ್ದು. ಇನ್ನೂ ನೆನಪಿದೆ; ನಾನು ಜ್ವರವೆಂದು ಹಾಸಿಗೆ ಹಿಡಿದಾಗ ಇಡೀ ರಾತ್ರಿ ಕುಳಿತು ತಣ್ಣೀರ ಬಟ್ಟೆಯನ್ನು ಹಣೆಯ ಮೇಲೆ ಇಟ್ಟಿದ್ದು. ಹೀಗೆ ಪಪ್ಪ ನನಗೆ ಎಲ್ಲ ರೀತಿಯ ಮಲ್ಟಿ ಟಾಸ್ಕರ್ ಎನ್ನಬಹುದು!’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.