ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗೃಹಲಕ್ಷ್ಮಿ’ | ₹66.70 ಕೋಟಿ ಜಮಾ: ಶಾಸಕ ಆರ್.ವಿ ದೇಶಪಾಂಡೆ

ಹಳಿಯಾಳ: 29,083 ಫಲಾನುಭವಿಗಳು– ದೇಶಪಾಂಡೆ
Published 3 ಸೆಪ್ಟೆಂಬರ್ 2024, 15:40 IST
Last Updated 3 ಸೆಪ್ಟೆಂಬರ್ 2024, 15:40 IST
ಅಕ್ಷರ ಗಾತ್ರ

ಹಳಿಯಾಳ: ‘ಪ್ರಜಾಪ್ರಭುತ್ವದಲ್ಲಿ ಜನರು ಕೊಟ್ಟ ಅಧಿಕಾರವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಜನಸಾಮಾನ್ಯರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.

ಇಲ್ಲಿನ ತಾಲ್ಲೂಕು ಸಭಾಭವನದಲ್ಲಿ ಮಂಗಳವಾರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

‘ಗ್ಯಾರಂಟಿ ಯೋಜನೆ ಸದುಪಯೋಗವಾಗಬೇಕು. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಂಪನ್ನ ಹೊಂದಬೇಕು. ಹೆಣ್ಣು ಮಕ್ಕಳು ಕ್ರಿಯಾಶೀಲರಾಗಬೇಕು. ಸ್ವಚ್ಛತೆಗಾಗಿ ಆದ್ಯತೆ ನೀಡಬೇಕು’ ಎಂದರು.

‘ಹಳಿಯಾಳ ಪಟ್ಟಣ ಅಭಿವೃದ್ಧಿ ಹೊಂದುತ್ತಿದೆ. ಗೃಹಲಕ್ಷ್ಮಿ ಯೋಜನೆ ಅಡಿ ತಾಲ್ಲೂಕಿನ 29,083 ಫಲಾನುಭವಿಗಳಿಗೆ ಈವರೆಗೆ ₹66.70 ಕೋಟಿ ಜಮಾ ಆಗಿದೆ . ಅನ್ನಭಾಗ್ಯ ಯೋಜನೆ ಅಡಿ ₹14.32 ಕೋಟಿ ವ್ಯಯ ಮಾಡಲಾಗಿದೆ’ ಎಂದು ವಿವರಿಸಿದ ಅವರು, ‘ಅರ್ಹ ಫಲಾನುಭವಿಗಳು ಮಾತ್ರ ಯೋಜನೆಯ ಲಾಭ ಪಡೆದುಕೊಳ್ಳಿ’ ಎಂದರು.

ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷ ಲಕ್ಷ್ಮಿ ವಡ್ಡರ, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ಸುಭಾಷ್ ಕೋರ್ವೇಕರ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುಮಾರ ಜಾವಳೆಕರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ಆರ್ ಹಾಗೂ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯರು ಇದ್ದರು.

ಹಳಿಯಾಳದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಆರ್ ವಿ ದೇಶಪಾಂಡೆ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಉಪಾಧ್ಯಕ್ಷ ಸುಭಾಷ್ ಕೊರ್ವೇಕರ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT