ಭಟ್ಕಳ: ಭಟ್ಕಳದ ಅಳ್ವೇಕೋಡಿ ಬಂದರಿನಲ್ಲಿ ಅಪರಿಚಿತ ಕಾರೊಂದು ಪತ್ತೆಯಾಗಿದ್ದು, ಸ್ಥಳೀಯರು ಕಾರಿನ ಮಾಲೀಕನ ವಿಳಾಸ ಪತ್ತೆ ಮಾಡಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ನಿವಾಸಿ ನವೀನಕುಮಾರ ಬಸವರಾಜ ಗೋಂಡಕರ್ (34) ಕಾಣೆಯಾದವರು. ಈ ಕುರಿತು ನವೀನಕುಮಾರ ಅವರ ಸಹೋದರ ಸೂರಜಕುಮಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನವೀನಕುಮಾರ ಮೇ 30 ರಂದು ಮನೆಯಿಂದ ಎಲ್ಲಿಗೋ ಹೋಗಿದ್ದರು. ಜೂ.2ರಂದು ಸಂಜೆ 7.30 ಸುಮಾರಿಗೆ ಫೋನ್ ಮಾಡಿದಾಗ ಮರುದಿನ ಬರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜೂ.3ರಂದು ಭಟ್ಕಳದಿಂದ ಅಪರಿಚಿತರೊಬ್ಬರು ನವೀನಕುಮಾರ ಅತ್ತೆಯ ಮಗ ಗಗನ ಅವರ ಮೊಬೈಲ್ ನಂಬರ ಪೋನ್ ಮಾಡಿ ಅಪರಿಚಿತ ಕಾರ ಅಳ್ವೇಕೋಡಿ ಬಂದರನಲ್ಲಿ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ಸಿಕ್ಕ ಕೂಡಲೇ ಭಟ್ಕಳ ಬಂದು ಕಾರು ನಿಂತ ಅಕ್ಕಪಕ್ಕ ಹುಡುಕಿದರೂ ನವೀನಕುಮಾರ ಸಿಕ್ಕಿಲ್ಲ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.