ಕಾರವಾರ: ಜಿಲ್ಲೆಯ ಕರಾವಳಿಯಾದ್ಯಂತ ಮಂಗಳವಾರ ಬೆಳಿಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಕಾರವಾರ ನಗರ ಮತ್ತು ಸುತ್ತಮುತ್ತ ಹಲವು ರಸ್ತೆಗಳು ಜಲಾವೃತವಾಗಿವೆ.

ಹಬ್ಬುವಾಡದಲ್ಲಿ ಹೈಚರ್ಚ್ ರಸ್ತೆ, ನಂದನಗದ್ದಾ, ರೈಲು ನಿಲ್ದಾಣ ರಸ್ತೆ ಸೇರಿದಂತೆ ಹಲವೆಡೆ ಚರಂಡಿಯಿಂದ ಮಳೆ ನೀರು ಉಕ್ಕಿ ಹರಿದಿದೆ. ರಸ್ತೆಯಲ್ಲಿರುವ ಹಂಪ್‌ಗಳು ಕೂಡ ಮುಳುಗಿದ್ದು, ವಾಹನ ಸವಾರರ ಅರಿವಿಗೆ ಬಾರದೇ ಪೇಚಾಡಿದರು. ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದ ಕಾರಣ ಹಲವೆಡೆ ದಟ್ಟಣೆ ಹೆಚ್ಚಾಗಿತ‌್ತು. ರವೀಂದ್ರನಾಥ ಟ್ಯಾಗೋರ್ ಕಡಲತೀರದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಳೆ ನೀರು ತುಂಬಿತ್ತು. ಇದರಿಂದ ಸುಮಾರು ಅರ್ಧ ಕಿಲೋಮೀಟರ್ ರಸ್ತೆಯು ನದಿಯಂತೆ ಗೋಚರಿಸುತ್ತಿತ್ತು.

ಶಾಲೆಗಳಲ್ಲಿ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೂ ಅಡಚಣೆಯಾಯಿತು. ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಆಡಳಿತ ಮಂಡಳಿಯವರು, ಶಾಲಾ ಕೊಠಡಿಗಳಲ್ಲೇ ಕಾರ್ಯಕ್ರಮ ಹಮ್ಮಿಕೊಂಡರು. ಬೆಳಿಗ್ಗೆಯಿಂದಲೇ ಮಳೆ ಜೋರಾಗಿ ಸುರಿದ ಕಾರಣ ಅಂಗನವಾಡಿ, ಎಲ್.ಕೆ.ಜಿ, ಯು.ಕೆ.ಜಿ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಪಾಲಕರು ಹಿಂಜರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.