ಕುಮಟಾ: ಇಲ್ಲಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಖಾಲಿ ಇರುವ ಹೆರಿಗೆ ಹಾಗೂ ಸ್ತ್ರೀರೋಗ ತಜ್ಞರ ಹುದ್ದೆಯನ್ನು ತಕ್ಷಣ ಭರ್ತಿ ಮಾಡಿಕೊಳ್ಳಬೇಕು ಎಂದು ಸೋಮವಾರ ಜೆಡಿ(ಎಸ್) ಕಾರ್ಯಕರ್ತರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗಣೇಶ ನಾಯ್ಕ ಅವರಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿ(ಎಸ್) ರಾಜ್ಯ ಕೋರ್ ಸಮಿತಿ ಸದಸ್ಯ ಸೂರಜ್ ನಾಯ್ಕ, ‘ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ತೀ ಹೆರಿಗೆ ಹಾಗೂ ಸ್ರ್ತೀ ರೋಗ ತಜ್ಞರು ನಿವೃತ್ತಿಯಾದ ನಂತರ ಬೇರೆ ವೈದ್ಯರ ನೇಮಕಾತಿ ಇನ್ನೂ ಆಗಿಲ್ಲ. ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಸ್ರ್ತೀ ರೋಗ ತಜ್ಞರಿಲ್ಲದ ಕಾರಣ ಬಡವರು ಹೆರಿಗೆಗಾಗಿ ಹೆಚ್ಚು ಹಣ ತೆತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಕಾಯಂ ವೈದ್ಯರ ನೇಮಕಾತಿ ಆಗುವರೆಗೆ ಜಿಲ್ಲಾ ಆಸ್ಪತ್ರೆಯಿಂದ ಹಂಗಾಮಿ ವೈದ್ಯರನ್ನು ನಿಯೋಜಿಸಬೇಕು. ಈ ಕೆಲಸ ಇನ್ನು 15 ದಿನದಲ್ಲಿ ಆಗದಿದ್ದರೆ ಪಕ್ಷದ ನೇತೃತ್ವದಲ್ಲಿ ಸಾರ್ವಜನಿಕರ ನೆರವಿನೊಂದಿಗೆ ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.

ಪಕ್ಷದ ತಾಲ್ಲೂಕು ಘಟಕ ಅಧ್ಯಕ್ಷ ಸಿ.ಜಿ ಹೆಗಡೆ, ಪ್ರಧಾನ ಕಾರ್ಯದರ್ಶಿ ದತ್ತ ಪಟಗಾರ, ಮುಖಂಡರಾದ ಗೋವಿಂದರಾಜ ಶಾನಭಾಗ, ವೆಂಕಟೇಶ ಗುನಗ, ಭವಾನಿ ಹಳ್ಳೇರ, ಸತೀಶ ಚಂದಾವರ, ದಿವಾಕರ ಅಘನಾಶಿನಿ, ವಿನಾಯಕ ನಾಯ್ಕ, ರಾಘು ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.