ಬಹ್ರೈನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಉಪಾಧ್ಯಕ್ಷ ಡಿ.ರಮೇಶ್, ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಅವರು ಬಹ್ರೈನ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುಭ ಕೋರಿದರು. ‘ಮೂರು ತಿಂಗಳುಗಳಿಂದ ರಾಜ್ಯಕ್ಕೆ ಮರಳಲು ಅವರು ಕಾಯುತ್ತಿದ್ದರು. ಬಹ್ರೈನ್‍ನ ಭಾರತೀಯ ದೂತಾವಾಸ ಮತ್ತು ಕನ್ನಡ ಸಂಘದ ಕಾರ್ಯವನ್ನು ಅವರು ಶ್ಲಾಘಿಸಿದರು. ಬಹ್ರೈನ್‍ನಲ್ಲಿ ಸಿಲುಕಿಕೊಂಡವರು ತಾಯ್ನಾಡಿಗೆ ಮರಳಲು ಅನುಕೂಲ ಮಾಡಿಕೊಡುವಂತೆ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅವರು, ಬಹ್ರೈನ್‍ನಲ್ಲಿರುವ ಭಾರತೀಯ ದೂತಾವಾಸ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ಅನಂತಕುಮಾರ ಹೆಗಡೆ, ನಳಿನ್‌ಕುಮಾರ ಕಟೀಲ್ ಮೊದಲಾದವರನ್ನು ವಿನಂತಿಸಿದ್ದರು’ ಎಂದು ತಿಳಿಸಿದ್ದಾರೆ.