ಶಿರಸಿ: ತಾಲ್ಲೂಕಿನ ಬನಾವಸಿಯಲ್ಲಿ ವರದಾ ನದಿ ನೀರನ್ನು ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಸಿ.ಎಂ ಭಾವಚಿತ್ರದ ಬ್ಯಾನರ್ ಜತೆಗೆ ಮಾಜಿ ಸಿ.ಎಂ ಸಿದ್ದರಾಮಯ್ಯ ಬ್ಯಾನರ್ ಕೂಡ ರಾರಾಜಿಸುತ್ತಿದೆ.
ಸುಮಾರು ₹65 ಕೋಟಿ ವರ್ಷದ ವೆಚ್ಚದಲ್ಲಿ 32 ಕೆರೆಗಳನ್ನು ತುಂಬಿಸುವ ಯೋಜನೆ ಕಳೆದ ವರ್ಷವೇ ಪೂರ್ಣಗೊಂಡಿತ್ತು. ಚುನಾವಣೆಗೆ ಕೆಲ ದಿನ ಬಾಕಿ ಇರುವಾಗಲೆ ಯೋಜನೆಯ ಉದ್ಘಾಟನೆ ನೆರವೇರಿಸಲಾಗುತ್ತಿದೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಯೋಜನೆಯ ರೂವಾರಿ ಎಂದು ಬಿಂಬಿಸುವ ಬ್ಯಾನರ್ ಗಳನ್ನು ಬನವಾಸಿ ಸುತ್ತಮುತ್ತ ಅಳವಡಿಸಲಾಗಿದೆ. ‘ಬನವಾಸಿಯ ಭಗೀರಥ ಶಿವರಾಮ ಹೆಬ್ಬಾರ’ ಎಂಬ ಮುದ್ರಣದೊಂದಿಗೆ ಈ ಬ್ಯಾನರ್‌ಗಳನ್ನು ಅವರ ಅಭಿಮಾನಿಗಳು ಅಳವಡಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಆರ್.ವಿ.ದೇಶಪಾಂಡೆ ಚಿತ್ರವುಳ್ಳ ಬ್ಯಾನರ್ ಗಳನ್ನು ಕೆಲವು ಕಡೆ ಅಳವಡಿಸಿದ್ದಾರೆ.
‘ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ಕೆರೆ ತುಂಬುವ ಯೋಜನೆಗೆ ಅನುದಾನ ನೀಡಿದ್ದು ಸಿದ್ದರಾಮಯ್ಯನವರಿಗೆ ಅಭಿನಂದನೆ’ ಎಂದು ಬರೆಯಲಾಗಿದೆ.
ಇವನ್ನೂ ಓದಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.