ಯಲ್ಲಾಪುರ: ಶಿರ್ಲೆ ಜಲಪಾತಕ್ಕೆಂದು ಹೋಗಿ ಕಾಡಿನಲ್ಲಿ ನಾಪತ್ತೆಯಾದವರು ಸುರಕ್ಷಿತವಾಗಿ ಪತ್ತೆಯಾಗಿದ್ದು, ಅವರನ್ನು ಯಲ್ಲಾಪುರಕ್ಕೆ ಕರೆದುಕೊಂಡು ಬರಲಾಗಿದೆ.

ಹುಬ್ಬಳ್ಳಿಯ ನವನಗರದ ಮೆಹಬೂಬ್, ಇಮ್ತಿಯಾಜ್, ಅಹಮದ್, ಶಾನವಾಜ್, ಅಲ್ತಾಫ್ ಹಾಗೂ ಆಸಿಫ್ ಮೂರು ಡಿಯೋ ಸ್ಕೂಟರ್‌ನಲ್ಲಿ ಗುರುವಾರ ಜಲಪಾತಕ್ಕೆ ತೆರಳಿದ್ದರು. ಹಳ್ಳ ದಾಟಲು ಇದ್ದ ಕಾಲುಸಂಕದಲ್ಲಿ ಅವರು ಸಾಗಿದ್ದರು. ಆದರೆ, ನೀರಿನ ಪ್ರವಾಹ ಹೆಚ್ಚಾಗಿ, ಕಾಲುಸಂಕ ಕೊಚ್ಚಿಕೊಂಡು ಹೋಯಿತು. ಇದರಿಂದ ಪುನಃ ಬರಲಾಗದೇ ಜಲಪಾತವಿರುವ ಗುಡ್ಡದ ಮತ್ತೊಂದು ಭಾಗದಲ್ಲಿ ರಾತ್ರಿ ಕಳೆದರು. ಶುಕ್ರವಾರ ಬೆಳಿಗ್ಗೆ ದಾರಿ ಹುಡುಕುತ್ತ ರಾಘವೇಂದ್ರ ಭಟ್ಟ ಎಂಬವರ ತೋಟಕ್ಕೆ ತಲುಪಿದರು. ಅವರು ಬೆಳಿಗ್ಗೆ ತೋಟಕ್ಕೆ ತೆರಳಿದ್ದಾಗ ತೋಟದ ಮೂಲೆಯಲ್ಲಿ ಆರು ಮಂದಿ ನಡುಗುತ್ತ ನಿಂತಿರುವುದು ಕಂಡುಬಂತು.

ನಾಪತ್ತೆಯಾಗಿದ್ದವರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಹುಬ್ಬಳ್ಳಿಯಿಂದ ಬಂದ ಅವರ ಸಂಬಂಧಿಕರು ತೀವ್ರವಾಗಿ ಹುಡುಕಾಟ ನಡೆಸಿದ್ದರು. ಪತ್ತೆಯಾದ ಅವರನ್ನು ಪೊಲೀಸ್ ಸಿಬ್ಬಂದಿಗೆ ಒಪ್ಪಿಸಲಾಯಿತು.

ಇದನ್ನೂ ಓದಿ... ಉಕ್ಕಿ ಹರಿದ ವೇದಗಂಗಾ ನದಿ: ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.