ಕಾರವಾರ: ಆರೂವರೆ ದಶಕಗಳಷ್ಟು ಹಳೆಯದಾದರೂ ಸಭಾಂಗಣ ಹೊಂದಿಲ್ಲದ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ₹70 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸುವ ಮೂಲಕ ಕೊರತೆಯನ್ನು ಹಳೆಯ ವಿದ್ಯಾರ್ಥಿಗಳ ತಂಡ ನೀಗಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ಹಂತ ಹಂತವಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಂದ ಮಾತ್ರವೇ ದೇಣಿಗೆ ಮೊತ್ತ ಸಂಗ್ರಹಿಸಿ, ಅದರಲ್ಲಿಯೇ ಸಭಾಂಗಣವನ್ನು ನಿರ್ಮಿಸಲಾಗಿದ್ದು, ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಉದ್ಘಾಟಿಸಲು ತಯಾರಿ ನಡೆದಿದೆ.

ಕಾಲೇಜು ಆವರಣದಲ್ಲಿನ ಸುಮಾರು ಎರಡು ಗುಂಟೆ ಜಾಗದಲ್ಲಿ ಎರಡು ಅಂತಸ್ತಿನ ಕಟ್ಟಡ ತಲೆ ಎತ್ತಿದೆ. ವಿಶಾಲ ವೇದಿಕೆ, ಅದಕ್ಕೆ ಹೊಂದಿಕೊಂಡು ಎರಡು ಕೊಠಡಿಗಳು, ನೂರಾರು ಜನರು ಏಕಕಾಲಕ್ಕೆ ಕುಳಿತುಕೊಳ್ಳಲು ವಿಸ್ತಾರವಾದ ಜಾಗವಿದೆ. ಮೊದಲ ಮಹಡಿಯಲ್ಲಿಯೂ ವೀಕ್ಷಣಾ ಗ್ಯಾಲರಿ ಇದೆ.

‘ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಸೆಮಿನಾರ್ ಚಟುವಟಿಕೆ ಕಡ್ಡಾಯ. ಆದರೆ, ದೊಡ್ಡ ಮಟ್ಟದಲ್ಲಿ ಸೆಮಿನಾರ್ ಆಯೋಜಿಸಲು ಸಭಾಂಗಣ ಇಲ್ಲ ಎಂಬ ಕೊರಗು ಇತ್ತು. ಈ ಕಾರಣಕ್ಕೆ ಹಳೆಯ ವಿದ್ಯಾರ್ಥಿಗಳು ಚರ್ಚಿಸಿ, ಸಭಾಂಗಣವೊಂದನ್ನು ನಿರ್ಮಿಸಲು ನಿರ್ಧರಿಸಿದ್ದೆವು. ಇದಕ್ಕಾಗಿ 2020ರಿಂದಲೇ ದೇಣಿಗೆ ಸಂಗ್ರಹಿಸುವ ಕೆಲಸ ಆರಂಭವಾಯಿತು. ಕೋವಿಡ್ ಕಾರಣಕ್ಕೆ ಪ್ರಕ್ರಿಯೆಗೆ ಅಡ್ಡಿಯುಂಟಾಯಿತು. ಆದರೆ, ನಿರಂತರವಾಗಿ ಹಲವು ಹಳೆಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸುತ್ತ ಅವರ ಮನವೊಲಿಸುವ ಕೆಲಸ ಮಾಡಿದೆವು. ಪರಿಣಾಮವಾಗಿ ₹70 ಲಕ್ಷದಷ್ಟು ಮೊತ್ತ ಸಂಗ್ರಹವಾಗಿದೆ. ಅದರಲ್ಲಿ ಸಭಾಂಗಣ ನಿರ್ಮಾಣಗೊಳಿಸಲಾಗಿದೆ’ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸತೀಶ ಗಾಂವಕರ ತಿಳಿಸಿದರು.

‘2008ರಲ್ಲೇ ಸಂಘವನ್ನು ಸ್ಥಾಪಿಸಿದ್ದೇವೆ. 185 ಕಾಯಂ ಸದಸ್ಯರು ಸಂಘದಲ್ಲಿದ್ದಾರೆ. ಪ್ರತಿ ವರ್ಷ ನೂರಾರು ಜನರು ಕಾಲೇಜಿನಲ್ಲಿ ವ್ಯಾಸಂಗ ಮುಗಿಸುವಾಗ ಅವರಗೆ ಸದಸ್ಯತ್ವ ನೀಡಲಾಗುತ್ತದೆ. ಆದರೆ, ಕಾಯಂ ಸದಸ್ಯತ್ವವನ್ನು ಕೆಲವರು ಮಾತ್ರ ಪಡೆದುಕೊಳ್ಳುತ್ತಾರೆ. ಸಭಾಂಗಣ ನಿರ್ಮಿಸುವ ವಿಚಾರದಲ್ಲಿ ನೂರಾರು ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿ ದೇಣಿಗೆ ನೀಡಿದ್ದಾರೆ. ಅವರಲ್ಲಿ ಕೆಲವರು ದೊಡ್ಡ ಉದ್ಯಮಿಗಳಾಗಿದ್ದರೆ, ಸಣ್ಣ ವೇತನಕ್ಕೆ ಕೆಲಸ ಮಾಡುವವರೂ ಇದ್ದಾರೆ’ ಎಂದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುವವರಲ್ಲಿ ಬಹುತೇಕ ಬಡವರು ಮಧ್ಯಮ ವರ್ಗದ ಕುಟುಂಬದವರು. ಸೆಮಿನಾರ್ ಸಾಂಸ್ಕೃತಿಕ ಪ್ರತಿಭೆ ಪ್ರದರ್ಶನಕ್ಕೆ ಸ್ಥಳದ ಅಭಾವವಿತ್ತು. ಈ ಕೊರತೆ ನೀಗಲಿದೆ
ಸತೀಶ ಗಾಂವಕರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ

ನಿರ್ವಹಣೆಗೆ ಹಣ ಮೀಸಲಿಡುತ್ತೇವೆ:

‘ಸಭಾಂಗಣದಲ್ಲಿ ಆಸನದ ವ್ಯವಸ್ಥೆಗೆ ಇನ್ನೂ ₹15–20 ಲಕ್ಷ ಹೊಂದಿಸುವ ಪ್ರಯತ್ನ ಸಾಗಿದೆ. ಅದಾದ ಬಳಿಕ ₹25 ಲಕ್ಷ ಮೊತ್ತವನ್ನು ಸಭಾಂಗಣ ನಿರ್ವಹಣೆಗೆ ಠೇವಣಿ ಇರಿಸಿ ಅದರ ಬಡ್ಡಿ ಮೊತ್ತದಲ್ಲಿ ನಿರ್ವಹಣೆಗೆ ಅನುಕೂಲವಾಗುವಂತೆ ಮಾಡುವ ಯೋಜನೆ ಇದೆ. ಹಳೆಯ ವಿದ್ಯಾರ್ಥಿಗಳ ಹೊರತಾಗಿ ಬೇರೆ ಯಾರಿಂದಲೂ ದೇಣಿಗೆ ಪಡೆದಿಲ್ಲ. ಹಳೆಯ ವಿದ್ಯಾರ್ಥಿಗಳೀಂದಲೇ ಕಲಿತ ಕಾಲೇಜಿಗೆ ಅಗತ್ಯ ಸೌಕರ್ಯ ಒದಗಿಸುವದು ಉದ್ದೇಶವಾಗಿದೆ’ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ ಗಾಂವಕರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.