ವಿದ್ಯುತ್ ಸಂಪರ್ಕ ಸದ್ಯಕ್ಕೆ ಕಷ್ಟ
‘ಕೊಡಸಳ್ಳಿ ಅಣಕಟ್ಟೆ ಪ್ರದೇಶ ಅದರ ಸಮೀಪದಲ್ಲಿರುವ ಜೊಯಿಡಾದ ಸೂಳಗೇರಿ ಗ್ರಾಮಗಳಿಗೆ 33ಕೆವಿ ಮಾರ್ಗದಿಂದ ವಿದ್ಯುತ್ ಪೂರೈಸಲಾಗುತ್ತಿದೆ. ಅಣೆಕಟ್ಟೆಯಿಂದ 35 ಕಿ.ಮೀ ದೂರದ ಮಲ್ಲಾಪುರದಲ್ಲಿ ಈಚೆಗೆ ಸುರಿದ ಗಾಳಿ ಮಳೆಗೆ ಹಲವು ಕಂಬಗಳು ಮುರಿದು ಬಿದ್ದಿವೆ. ಅವುಗಳ ಮರುಸ್ಥಾಪನೆಗೆ ಜಮೀನು ಮಾಲೀಕರು ಒಪ್ಪಿಗೆ ನೀಡುತ್ತಿಲ್ಲ' ಎಂದು ಹೆಸ್ಕಾಂ ಕಾರವಾರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರೋಶನಿ ಪೆಡ್ನೇಕರ್ ತಿಳಿಸಿದರು. ‘ಬಾಳೆಮನೆ ಸಮೀಪ ಭೂಕುಸಿತ ಉಂಟಾಗಿದ್ದರಿಂದ ಅಲ್ಲಿಯೂ ಕೆಲ ಕಂಬಗಳು ಮುರಿದು ಬಿದ್ದಿವೆ. ಅವುಗಳನ್ನು ಮರುಸ್ಥಾಪಿಸಲು ಹಲವು ದಿನ ಬೇಕಾಗಬಹುದು. ಸದ್ಯಕ್ಕೆ ವಿದ್ಯುತ್ ಸಂಪರ್ಕ ಒದಗಿಸುವುದು ಕಷ್ಟವಾಗಬಹುದು’ ಎಂದರು.