ಕಾರವಾರ: ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ದೂದ್ ಸಾಗರ ಜಲಪಾತದ ಸಮೀಪದ ರೈಲು ಮಾರ್ಗದ ಮೇಲೆ ಸೋಮವಾರ ನಸುಕಿನ ಜಾವ ಭೂಕುಸಿತ ಸಂಭವಿಸಿದೆ.
ದೂದ್ ಸಾಗರ ಬಳಿ ರೈಲ್ವೆ ಹಳಿಯ ಸುರಂಗ ಮಾರ್ಗದ ಎದುರು ಈ ಘಟನೆ ಸಂಭವಿಸಿದೆ. ಬೃಹತ್ ಗಾತ್ರದ ಕಲ್ಲುಗಳು, ಮಣ್ಣಿನ ರಾಶಿ ಹಳಿಗಳನ್ನು ಮುಚ್ಚಿ ಹಾಕಿದೆ.
ನೈರುತ್ಯ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೆರವು ಕಾರ್ಯ ನಡೆಸಿದ್ದಾರೆ. ರೈಲ್ವೆ ಸಂಚಾರಕ್ಕೆ ಶೀಘ್ರ ಅನುವು ಮಾಡಿಕೊಟ್ಟಿರುವುದರಿಂದ ಯಾವುದೇ ಸಂಚಾರ ವ್ಯತ್ಯಯ ಆಗಿಲ್ಲ ಎಂದು ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.