ಮಹಾಲಿಂಗನಹಳ್ಳಿ: ಸಮೀಪದ ನಂದಗಾಂವ ಗ್ರಾಮದ ಬೀರಪ್ಪ ದಳವಾಯಿ ಅವರ ತೋಟದ ಮರಕ್ಕೆ ನೇಣು ಬಿಗಿದುಕೊಂಡು ಇಬ್ಬರು ಪ್ರೇಮಿಗಳು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಂದಗಾಂವ ಗ್ರಾಮದ ಸಚಿನ್ ಬೀರಪ್ಪ ದಳವಾಯಿ (22), ಪ್ರತಿಭಾ ಮಲ್ಲಪ್ಪ ಮಡಿವಾಳ (19) ಮೃತರು. ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರು ಮದುವೆಗೆ ಹಿರಿಯರು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.