ಕಾರವಾರ: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆಶುಕ್ರವಾರ ದಿಢೀರ್ ಭೇಟಿ ನೀಡಿದಶಾಸಕಿ ರೂಪಾಲಿ ಎಸ್.ನಾಯ್ಕ, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯಾಹ್ನ 12.30ರ ಸುಮಾರಿಗೆ ಅವರು ಭೇಟಿ ನೀಡಿದಾಗ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಯಾರೂ ಇರಲಿಲ್ಲ. ಕರೆ ಮಾಡಿದರೂ ಬರಲಿಲ್ಲ. ಇದರ ವಿರುದ್ಧ ಶಾಸಕಿ ಸಿಟ್ಟಾದರು.

ಇದೇ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದ ನೀಲಂಗಜನೀಕರ್ ನಿವೃತ್ತರಾಗಿ ಏಳು ವರ್ಷಗಳೇ ಕಳೆದವು. ಆದರೆ, ಅವರಿಗೆ ಇನ್ನೂ ಪಿಂಚಣಿ ನೀಡುತ್ತಿಲ್ಲ. ಈ ಬಗ್ಗೆ ಸಾಕಷ್ಟು ಅಲೆದಾಟ ನಡೆಸಿದರೂ ಇದುವರೆಗೆಸಮಸ್ಯೆ ಪರಿಹಾರಕಾಣಲಿಲ್ಲ. ಇದನ್ನು ಕೂಡಲೇಇತ್ಯರ್ಥಗೊಳಿಸಬೇಕು ಎಂದು ಕಚೇರಿಯಲ್ಲಿದ್ದ ಗುತ್ತಿಗೆ ನೌಕರರಿಗೆ ತಾಕೀತು ಮಾಡಿದರು.

ಕಾರವಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಿಸಲು ಪ್ರಾಧಿಕಾರದಿಂದ ಅನುಮತಿಯ ಸರಳೀಕರಣ ಹಾಗೂ ಸ್ಥಳ ವಿನ್ಯಾಸ ನಕ್ಷೆ ಕುರಿತು ಚರ್ಚಿಸುವ ಉದ್ದೇಶದಿಂದ ರೂಪಾಲಿ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜನಸಾಮಾನ್ಯರು ಮನೆ ನಿರ್ಮಿಸಲು ಹತ್ತು ಹಲವು ಕಾನೂನುಗಳನ್ನು ಅಧಿಕಾರಿಗಳು ಹೇಳುತ್ತಾರೆ. ಆದರೆ, 5–6 ಅಂತಸ್ತುಗಳ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಹೇಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.