ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ 36 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಭಟ್ಕಳದಲ್ಲಿ 19 ಜನರು ಸೋಂಕಿತರಾಗಿದ್ದಾರೆ. ಕಾರವಾರದಲ್ಲಿ ಆರು, ಹಳಿಯಾಳದಲ್ಲಿ ಮೂವರು, ಕುಮಟಾ, ಹೊನ್ನಾವರ, ಶಿರಸಿಯಲ್ಲಿ ತಲಾ ಇಬ್ಬರು, ಜೊಯಿಡಾ ಹಾಗೂ ಮುಂಡಗೋಡದಲ್ಲಿ ತಲಾ ಒಬ್ಬರಿಗೆ ಖಚಿತವಾಗಿದೆ.

ಭಟ್ಕಳದ ಸೋಂಕಿತರಪೈಕಿ ಮೂವರು ದುಬೈನಿಂದ ಮರಳಿದ್ದರೆ, ಇಬ್ಬರು ಮಹಾರಾಷ್ಟ್ರದಿಂದ ಬಂದವರು. 10 ಮಂದಿ ಸೋಂಕಿತರು ರೋಗಿ ಸಂಖ್ಯೆ 17121ಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಇಬ್ಬರು ಸೋಂಕಿತರು ರೋಗಿ ಸಂಖ್ಯೆ 17017ರ ಸಂಪರ್ಕದಿಂದ ಕೋವಿಡ್ ಪೀಡಿತರಾಗಿದ್ದಾರೆ. ಇಬ್ಬರು ಜ್ವರದ (ಐ.ಎಲ್.ಐ) ಲಕ್ಷಣಗಳಿವೆ. ಸೋಂಕಿತರಲ್ಲಿ ಎಂಟು ವರ್ಷದ ಮಕ್ಕಳಿಂದ 65 ವರ್ಷದ ಹಿರಿಯರೂ ಒಳಗೊಂಡಿದ್ದಾರೆ.

ಕಾರವಾರದಲ್ಲಿ ಗ್ರಾಮೀಣ ಭಾಗದಲ್ಲೂ ಸೋಂಕು ಖಚಿತವಾಗಿದೆ. ಹಳಗಾ ಗ್ರಾಮದ ಇಬ್ಬರು, ಚೆಂಡಿಯಾ, ತೋಡೂರು ಹಾಗೂ ಕಡವಾಡ ಗ್ರಾಮದ ತಲಾ ಒಬ್ಬರಿಗೆ ಕೋವಿಡ್ ದೃಢವಾಗಿದೆ. ಅವರಲ್ಲಿ ಇಬ್ಬರಿಗೆಐ.ಎಲ್.ಐ ಲಕ್ಷಣಗಳಿವೆ. ಇಬ್ಬರು ಬೆಂಗಳೂರಿನಿಂದ ಮರಳಿದವರಾಗಿದ್ದರೆ, ಒಬ್ಬರು ಗೋವಾದಿಂದ ಬಂದವರು. ಮತ್ತೊಬ್ಬರು ಅಂಕೋಲಾದವರಾಗಿದ್ದು, ರೋಗಿಯೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು.

ಹಳಿಯಾಳದ ಮೂವರ ಪೈಕಿ ಇಬ್ಬರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದರೆ, ಒಬ್ಬರು 14571 ಸಂಖ್ಯೆಯ ರೋಗಿಯ ಪ್ರಾಥಮಿಕ ಸಂಪರ್ಕವಾಗಿದ್ದಾರೆ. ಹೊನ್ನಾವರದಲ್ಲಿ ಕೋವಿಡ್ ಖಚಿತವಾಗಿರುವ ಇಬ್ಬರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಅವರಲ್ಲಿ ಒಬ್ಬರು ಟೋಲ್ ಗೇಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಶಿರಸಿ ತಾಲ್ಲೂಕಿನಲ್ಲಿ ಕೋವಿಡ್ ಕಾಣಿಸಿಕೊಂಡಿರುವ ಇಬ್ಬರಲ್ಲಿ ಒಬ್ಬರು ರೋಗಿ ಸಂಖ್ಯೆ12059ಯ ಪ್ರಾಥಮಿಕ ಸಂಪರ್ಕವಾಗಿದ್ದಾರೆ. ಮತ್ತೊಬ್ಬರು ದುಬೈನಿಂದ ಬಂದವರು. ಮುಂಡಗೋಡದಲ್ಲಿಸೋಂಕಿತ ವ್ಯಕ್ತಿಯು ಬೆಂಗಳೂರಿನಿಂದ ಈಚೆಗೆ ವಾಪಸಾಗಿದ್ದರು ಎಂದು ರಾಜ್ಯ ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

ಗ್ರಾಮೀಣ ಭಾಗದಲ್ಲಿದೃಢ:ಕಾರವಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕೋವಿಡ್ ದೃಢಪಡುತ್ತಿರುವುದು ಕೈಗಾ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ. ಸ್ಥಾವರದ ಹೊರ ಗುತ್ತಿಗೆ ನೌಕರರ ಪೈಕಿ ಬಹುತೇಕರು ಗ್ರಾಮೀಣ ಭಾಗದವರು. ಅದರಲ್ಲೂ ಹಳಗಾ, ಮಲ್ಲಾಪುರ ಸುತ್ತಮುತ್ತಲಿನ ಯುವಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.