ಕಾರವಾರ: ಹಲವು ದಶಕಗಳ ಹಿಂದಿನ ಭೂದಾಖಲೆಗಳ ಸ್ಥಿತಿಗತಿ ಹೇಗಿದೆಯೋ ಎಂಬ ಚಿಂತೆ ಇನ್ನು ಜನರಿಗೆ ಬೇಡ, ಕಡತಗಳು ಕೈಗೆ ಸಿಗುತ್ತಿಲ್ಲ, ಅವುಗಳನ್ನು ಹುಡುಕಾಡಲು ಸಮಯಬೇಕು ಎಂಬ ಹಾರಿಕೆ ಉತ್ತರವನ್ನೂ ಕಂದಾಯ ಇಲಾಖೆ ನೌಕರರು ನೀಡುವಂತಿಲ್ಲ. ಇವುಗಳಿಗೆ ಪರಿಹಾರವಾಗಿ ‘ಭೂ ಸುರಕ್ಷಾ’ ಯೋಜನೆಯಡಿ ಕಂದಾಯ ದಾಖಲೆಗಳು ಗಣಕೀಕರಣಗೊಳ್ಳುತ್ತಿವೆ.

ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲೆಯ ನಾಲ್ಕು ಉಪವಿಭಾಗಾಧಿಕಾರಿ ಕಚೇರಿ, 12 ತಹಶೀಲ್ದಾರ್ ಕಚೇರಿಗಳಲ್ಲಿನ ಎಲ್ಲ ವಿಧದ ಕಂದಾಯ ದಾಖಲೆಗಳು, ಕಡತಗಳ ನೋಂದಣಿ ಪುಸ್ತಕಗಳ ಮಾಹಿತಿಯನ್ನು ಕಳೆದ ಆರು ತಿಂಗಳಿನಿಂದಲೂ ಗಣಕೀಕರಣಗೊಳಿಸಲಾಗುತ್ತಿದೆ.

ಜ.1 ರಿಂದ ಆರಂಭಿಸಿದ ಪ್ರಕ್ರಿಯೆಯ ಅಡಿ 1.6 ಲಕ್ಷಕ್ಕೂ ಹೆಚ್ಚು ಕಡತಗಳ 55 ಲಕ್ಷಕ್ಕೂ ಹೆಚ್ಚು ಪುಟಗಳು, 23 ಸಾವಿರಕ್ಕೂ ಹೆಚ್ಚು ನೋಂದಣಿ ದಾಖಲೆಗಳ 69 ಲಕ್ಷದಷ್ಟು ಪುಟಗಳು ಸೇರಿದಂತೆ 1.24 ಕೋಟಿ ಪುಟಗಳಷ್ಟು ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ಸಂರಕ್ಷಿಸಿಡಲಾಗಿದೆ.

‘ಕಂದಾಯ ಇಲಾಖೆಗೆ ಸಂಬಂಧಿಸಿದ ಸಾಕಷ್ಟು ಹಳೆಯ ಕಡತಗಳು ಹಾಳಾಗುವ ಸ್ಥಿತಿಯಲ್ಲಿದ್ದವು. ಎಷ್ಟೇ ಸಂರಕ್ಷಿಸಿದರೂ ಅಭಿಲೇಖಾಲಯಗಳಲ್ಲಿ ಅವುಗಳನ್ನು ಸಂರಕ್ಷಿಸುವುದು ಸವಾಲಿನ ಕೆಲಸವಾಗಿತ್ತು. ಕಡತ ಮುಟ್ಟಿದರೆ ಕಾಗದಗಳು ಪುಡಿಯಾಗುತ್ತಿದ್ದವು. ಐದು ಆರು ದಶಕಗಳ ಹಿಂದಿನ ದಾಖಲೆಗಳು ಇಂತ ಸ್ಥಿತಿಯಲ್ಲಿದ್ದವು. ಅವುಗಳನ್ನು ವ್ಯವಸ್ಥಿತವಾಗಿ ಸಂರಕ್ಷಣೆ ಮಾಡಲು ಭೂಸುರಕ್ಷಾ ಯೋಜನೆ ನೆರವಿಗೆ ಬಂದಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಭೂಸುರಕ್ಷಾ ಯೋಜನೆಗೆ ಮೊದಲ ಹಂತದಲ್ಲಿ ಜಿಲ್ಲೆಯಿಂದ ಶಿರಸಿ ತಾಲ್ಲೂಕನ್ನು ಮಾತ್ರ ಪ್ರಾಯೋಗಿಕವಾಗಿ ಆಯ್ದುಕೊಳ್ಳಲಾಯಿತು. ಜನವರಿಯಿಂದ ಎಲ್ಲ ತಾಲ್ಲೂಕಿನಲ್ಲಿಯೂ ದಾಖಲೆಗಳನ್ನು ಗಣಕೀಕರಣಗೊಳಿಸಲು ಸೂಚನೆ ಬಂತು. ವರ್ಷದ ಆರಂಭದಿಂದಲೇ ದಾಖಲೆಗಳನ್ನು ಗಣಕೀಕರಣಗೊಳಿಸುವ ಪ್ರಕ್ರಿಯೆಗೆ ಎಲ್ಲ ತಹಶೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಹಿತ ಎಲ್ಲ ಕಚೇರಿಯಲ್ಲೂ ಗಣಕೀಕರಣಕ್ಕೆ ಪ್ರತ್ಯೇಕ ವಿಭಾಗ ಆರಂಭಿಸಿ, ಬೇರೆ ಬೇರೆ ವಿಭಾಗದ ಸಿಬ್ಬಂದಿಗೆ ಜವಾಬ್ದಾರಿ ನೀಡಲಾಯಿತು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ವಿವರಿಸಿದರು.

‘ಕಂದಾಯ ಭೂಮಿಗೆ ಸಂಬಂಧಿಸಿದ ಪಹಣಿ, ಭುಮಂಜೂರಾತಿ ಆದೇಶ, ಮಂಜೂರಾತಿ ಸಮಿತಿಯ ನಡಾವಳಿ, ಭೂಮಿಯ ವ್ಯಾಜ್ಯಕ್ಕೆ ಸಂಬಂಧಿಸಿದ ಕೋರ್ಟ್ ಆದೇಶಗಳು, ಸೇರಿದಂತೆ ಎಲ್ಲ ವಿಧದ ದಾಖಲೆಗಳನ್ನೂ ಸ್ಕ್ಯಾನಿಂಗ್ ಮಾಡಿ ಪ್ರತ್ಯೇಕವಾಗಿ ಸಂರಕ್ಷಿಸಿಡಲಾಗುತ್ತಿದೆ. ಭೂಮಿ ಮಾನಿಟರಿಂಗ್ ಸೆಲ್ನ ವೆಬ್ಸೈಟ್ನಲ್ಲೂ ದಾಖಲಿಸಲಾಗುತ್ತಿದೆ’ ಎಂದು ತಿಳಿಸಿದರು.

ಅಂಕಿ–ಅಂಶ

17,49,590: ಒಟ್ಟು ಕಂದಾಯ ಕಡತಗಳು

1,32,313: ಒಟ್ಟು ನೋಂದಣಿ ಪುಸ್ತಕಗಳು

1,60,838: ಗಣಕೀಕರಣವಾದ ಕಡತಗಳು

23,950: ಗಣಕೀಕರಣವಾದ ನೋಂದಣಿ ಪುಸ್ತಕಗಳು

1,24,12,128: ಸ್ಕ್ಯಾನಿಂಗ್ ಮಾಡಿದ ಪುಟಗಳ ಸಂಖ್ಯೆ

ಜಿಲ್ಲೆಯಲ್ಲಿ ನಿತ್ಯ ಸರಾಸರಿ 6 ಸಾವಿರಕ್ಕೂ ಹೆಚ್ಚು ಪುಟಗಳಷ್ಟು ಕಂದಾಯ ದಾಖಲೆಗಳು ಗಣಕೀಕರಣವಾಗುತ್ತಿದ್ದು ಕೆಲವೇ ದಿನಗಳಲ್ಲಿ ಪ್ರಕ್ರಿಯೆ ಪೂರ್ಣವಾಗಲಿದೆ.
– ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ

ಕಡತಗಳ ಸುಲಭ ಮಾಹಿತಿ

‘ಭೂಸುರಕ್ಷಾ ಯೋಜನೆಯಡಿ ಕಂದಾಯ ಇಲಾಖೆಗೆ ಸಂಬಂಧಿಸಿದ ಕಡತಗಳನ್ನು ಗಣಕೀಕರಣಗೊಳಿಸುವ ಜೊತೆಗೆ ಕಡತಗಳನ್ನು ವ್ಯವಸ್ಥಿತವಾಗಿ ನೋಂದಣಿ ಸಂಖ್ಯೆ ಆಧರಿಸಿ ಜೋಡಿಸಿಡುವ ಕೆಲಸವೂ ಸಾಗಿದೆ. ಕಡತಗಳನ್ನು ಯಾವ ಕಪಾಟಿನ ಯಾವ ಸ್ಥಳದಲ್ಲಿರಿಸಲಾಗಿದೆ ಎಂಬ ಮಾಹಿತಿಯನ್ನು ನೋಂದಣಿ ಪುಸ್ತಕದಲ್ಲಿ ಬರೆದಿಡಲಾಗುತ್ತಿದೆ. ಈ ಮಾಹಿತಿಯೂ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಸಾರ್ವಜನಿಕರು ದಾಖಲೆ ಸಂಗ್ರಹಕ್ಕೆ ಬಂದಾಗ ಸುಲಭವಾಗಿ ಕಡತ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ತ್ವರಿತವಾಗಿ ದಾಖಲೆ ಒದಗಿಸಲು ಇದು ನೆರವಾಗಲಿದೆ’ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.