ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ | ಮೊಸಳೆಗಳಿದ್ದ ನಾಲೆಗೆ ಮಗು ಎಸೆದ ತಾಯಿ: ಶವವಾಗಿ ಪತ್ತೆ

Published 5 ಮೇ 2024, 4:17 IST
Last Updated 5 ಮೇ 2024, 4:17 IST
ಅಕ್ಷರ ಗಾತ್ರ

ದಾಂಡೇಲಿ: ಇಲ್ಲಿನ ಹಾಲಮಡ್ಡಿ ಸಮೀಪ ಮೊಸಳೆಗಳಿರುವ, ಕಾಳಿನದಿ ಸೇರುವ ನಾಲೆಗೆ ತನ್ನ ಆರು ವರ್ಷದ ಮಗುವನ್ನು ಮಹಿಳೆಯೊಬ್ಬರು ಎಸೆದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮಗುವಿನ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ವಿನೋದ (6) ಎಂಬ ಮಗುವನ್ನು ಆತನ ತಾಯಿ ಸಾವಿತ್ರಿ ಸಿಳಿನಿ ನಾಲೆಗೆ ಎಸೆದಿದ್ದರು.

'ಪತಿ ರವಿಕುಮಾರ ಮತ್ತು ಸಾವಿತ್ರಿ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ಪತಿಯ ಮೇಲಿನ ಕೋಪದಿಂದ ಮಗುವನ್ನು ಎಸೆದಿರುವ ಸಾಧ್ಯತೆ ಇದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಂಚೆ ಗಾಂಧಿ ನಗರದಲ್ಲಿ ವಾಸವಿದ್ದ ದಂಪತಿ ಕಳೆದ ಎರಡು ತಿಂಗಳಿಂದ ಹಾಲಮಡ್ಡಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಕ್ಕೆ ಬಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಗುವಿಗೆ ತಡರಾತ್ರಿಯಿಂದಲೇ ಶೋಧ ಕಾರ್ಯ ನಡೆದಿತ್ತು. ಭಾನುವಾರ ಬೆಳಿಗ್ಗೆ ನಾಲೆಯ ಬಳಿ ಮಗುವಿನ ಮೃತದೇಹ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT