ಕಾರವಾರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸುರಕ್ಷತೆಯ ನೆಪವೊಡ್ಡಿ ಹಲವೆಡೆ ಸೇತುವೆಗಳ ಮೇಲೆ ಸಂಚಾರ ನಿಷೇಧಿಸಿ, ಕಾರವಾರದಲ್ಲಿ ಸುರಂಗ ಮಾರ್ಗ ಸ್ಥಗಿತಗೊಳಿಸಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶದ ವಿರುದ್ಧ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

‘ಸಂಚಾರಕ್ಕೆ ಕೆಲವು ಕಡೆ ನಿರ್ಬಂಧ ವಿಧಿಸಿದ್ದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ದೂರು ಜನರಿಂದ ಬರುತ್ತಿದೆ. ಅತಿಯಾಗಿ ಮಳೆ ಸುರಿಯುವ ವೇಳೆ ಸುರಕ್ಷತೆ ಕಾರಣಕ್ಕೆ ನಿರ್ಬಂಧ ವಿಧಿಸಿದ್ದು ಸರಿಇರಬಹುದು. ಆದರೆ, ದೀರ್ಘ ಕಾಲದವರೆಗೆ ಸಂಚಾರ ಸ್ಥಗಿತಗೊಳಿಸಿದರೆ ಪರ್ಯಾಯ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿ ಅಪಘಾತಗಳು ನಡೆಯುವುದು ಗಮನಕ್ಕೆ ಬರುತ್ತಿಲ್ಲವೆ?’ ಎಂದು ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.

‘ಹೊನ್ನಾವರದ ಶರಾವತಿ ನದಿಯ ಹಳೆಯ ಸೇತುವೆ ಮೇಲೆ ದ್ವಿಚಕ್ರ ವಾಹನ ಸಂಚರಿಸಬಹುದು ಎಂದು ಎಂಜಿನಿಯರ್ಗಳು ವರದಿ ಸಲ್ಲಿಸಿದ್ದಾರೆ. ಪೊಲೀಸರು ಅಪಘಾತ ನಿಯಂತ್ರಣದ ಸಲುವಾಗಿ ಈ ಕ್ರಮ ಸೂಕ್ತ ಎಂದು ಒಪ್ಪಿದ್ದಾರೆ. ವೆಂಕಟಾಪುರ ಸೇತುವೆ ಸೇರಿದಂತೆ ವಿವಿಧೆಡೆ ಸಂಚಾರ ನಿಷೇಧಿಸಿದ ಕಡೆ ಪುನರ್ಪರಿಶೀಲನೆ ನಡೆಸಿ’ ಎಂದು ಸೂಚಿಸಿದರು.

‘ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಶಿರಸಿ–ಹಾವೇರಿ ಹೆದ್ದಾರಿಗೆ ಶಿರಸಿ ನಗರದಲ್ಲಿ ರೂಪಿಸಿದ ನೀಲನಕ್ಷೆ ಸರಿಯಾಗಿಲ್ಲ. ರಸ್ತೆ ವಿಸ್ತರಣೆ ಮಾಡದೆ ಈಗಿರುವ ಮಾರ್ಗದಷ್ಟೆ ಹೆದ್ದಾರಿ ನಿರ್ಮಿಸುವ ಯೋಜನೆ ಪುನರ್ ಪರಿಶೀಲಿಸಬೇಕು’ ಎಂದು ಸೂಚಿಸಿದರು.

ಸೂರ್ಯಘರ್ ಯೋಜನೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ಪಡೆದರು. ಯೋಜನೆ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸೌರಫಲಕ ಅಳವಡಿಸಿ ಸೌರವಿದ್ಯುತ್ ಬಳಕೆ ಮಾಡಲು ಕ್ರಮವಹಿಸಿ ಎಂದರು.

ಜಿಲ್ಲೆಯಲ್ಲಿ ಗಾಂಜಾ, ಇನ್ನಿತರ ಮಾದಕ ಪದಾರ್ಥಗಳ ನಿಯಂತ್ರಣ ತರಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗೆ, ಅಜಿನೊಮೋಟೊ ಸೇರಿದಂತೆ ಆಹಾರಗಳಲ್ಲಿ ರಾಸಾಯನಿಕ ಬಳಕೆ ನಿಯಂತ್ರಣಕ್ಕೆ ತರುವಂತೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ ಮಳೆಯಿಂದ ಹದಗೆಟ್ಟ ರಸ್ತೆಗಳನ್ನು ತಕ್ಷಣ ದುರಸ್ತಿಪಡಿಸಬೇಕು. ಪಿಎಂ ಗ್ರಾಮೀಣ ಸಡಕ್ ಯೋಜನೆ ಅಡಿ ನಿರ್ಮಿಸಿದ ರಸ್ತೆಗಳು ಒಂದೆರಡು ವರ್ಷದೊಳಗೆ ಹಾಳಾಗಿದ್ದು ಅಂತಹ ರಸ್ತೆಗಳನ್ನು ಸರಿಪಡಿಸಬೇಕು ಎಂದು ಸೂಚಿಸಿದರು.

Cut-off box - ಕೇಂದ್ರದ ಯೋಜನೆಗಳ ಫಲ ತಲುಪಿಸಿ ‘ಕೇಂದ್ರ ಸರ್ಕಾರ ಜಾರಿಗೆ ತಂದ ಆಯುಷ್ಮಾನ್ ವಯೋ ವಂದನಾ ಪಿಎಂ ಸ್ವನಿಧಿ ಜಲಜೀವನ್ ಮಿಷನ್ ಸೇರಿದಂತೆ ಮಹತ್ವಾಕಾಂಕ್ಷೆ ಯೋಜನೆಗಳ ಪ್ರಗತಿ ಕುಂಠಿತವಾಗಬಾರದು. ಕೇಂದ್ರದ 103ಕ್ಕೂ ಹೆಚ್ಚು ಯೋಜನೆಗಳಿದ್ದು ಅವುಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಪಿಎಂ ಸ್ವನಿಧಿ ಯೋಜನೆಯಡಿ ಎರಡು ಮತ್ತು ಮೂರನೆ ಕಂತಿನ ಸಾಲ ವಿತರಣೆ ಪ್ರಗತಿ ಕುಂಠಿತವಾಗಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ಪಡೆದರು. ಜಿಲ್ಲೆಯ 8 ಮೀನುಗಾರಿಕೆ ಬಂದರುಗಳ ಮೇಲ್ದರ್ಜೆಗೇರಿಸಲು ಪ್ರಸ್ತಾವ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Cut-off box - ಧಾರಣಾ ಸಾಮರ್ಥ್ಯ ಅಧ್ಯಯನವಾಗಲಿ ‘ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸದೆ ದೊಡ್ಡ ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೆ ತರುವ ಕೆಲಸ ನಡೆಯಬಾರದು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ‘ಶರಾವತಿ ಪಂಪ್ಡ್ ಸ್ಟೊರೇಜ್ ಯೋಜನೆ ಜಾರಿಗೆ ಮುನ್ನ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಯಲಿ ಎಂದು ಪ್ರತಿಪಾದಿಸುತ್ತಿದ್ದೇನೆ. ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿದ್ದೇನೆ’ ಎಂದರು. ‘ಕೊಂಕಣ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಕಾರವಾರದ ರೈಲು ನಿಲ್ದಾಣವನ್ನು ನೀರು ಸಂಗ್ರಹಣೆ ವ್ಯವಸ್ಥೆಯ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲು ಚರ್ಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.