ಮುಂಡಗೋಡ: ‘ತಾಲ್ಲೂಕು ಆಡಳಿತ ಸೂಚಿಸಿದ ನಿಯಮಗಳನ್ನು ಪ್ರತಿಯೊಬ್ಬ ಚಾಲಕರು ಪಾಲಿಸಬೇಕು. ಪಟ್ಟಣದಿಂದ ಟಿಬೆಟಿಯನ್ ಕ್ಯಾಂಪ್ಗೆ ಹೋಗುವ ಮಾರ್ಗದಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು. ವಾಹನಗಳ ಪಾರ್ಕಿಂಗ್ಗೆ ಟಿಬೆಟಿಯನ್ ಮುಖಂಡರು ಹಾಗೂ ಪೊಲೀಸ್ ಇಲಾಖೆ ಜೊತೆಗೆ ಚರ್ಚಿಸಿ ಸೂಕ್ತ ಜಾಗ ನಿಗದಿಪಡಿಸಲಾಗುವುದು’ ಎಂದು ತಹಶೀಲ್ದಾರ್ ಶಂಕರ ಗೌಡಿ ಹೇಳಿದರು.

ತಾಲ್ಲೂಕಿನ ಟಿಬೆಟಿಯನ್ ಕಾಲೊನಿಗೆ ಡಿ.12ರಂದು ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಆಗಮಿಸುತ್ತಿರುವ ನಿಮಿತ್ತ ಆಟೊ ಹಾಗೂ ಟ್ಯಾಕ್ಸಿ ಚಾಲಕರ ಸಭೆಯನ್ನು ಬುಧವಾರ ತಾಲ್ಲೂಕು ಆಡಳಿತದ ಸಭಾಂಗಣದಲ್ಲಿ ನಡೆಸಲಾಯಿತು.

ಸಿಪಿಐ ರಂಗನಾಥ ನೀಲಮ್ಮನವರ ಮಾತನಾಡಿ, ‘ನ.25ರಂದು ಶಿರಸಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಆಟೊ ಹಾಗೂ ಟ್ಯಾಕ್ಸಿ ಚಾಲಕರಿಗೆ ಪಾಸ್ ನೀಡಲಾಗುವುದು. ಪಾಸ್ ಪಡೆಯಲು ವಾಹನಗಳ ದಾಖಲೆ ಕಡ್ಡಾಯವಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲೆ ನೀಡಬಹುದು. ಸಮಸ್ಯೆ ಕಂಡುಬಂದಲ್ಲಿ 112ಕ್ಕೆ ಕರೆ ಮಾಡಬೇಕು’ ಎಂದರು.

ಚಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ನಾಯರ ಮಾತನಾಡಿ, ‘ಪಟ್ಟಣದಲ್ಲಿರುವ ಎಲ್ಲ ಟ್ಯಾಕ್ಸಿ ಹಾಗೂ ಟಿಟಿ ವಾಹನಗಳಿಗೆ ಕ್ಯಾಂಪ್ ಒಳಗಡೆ ಸಂಚರಿಸಲು ಅನುಮತಿ ನೀಡಬೇಕು. ಚಾಲಕರು ಸೂಕ್ತ ದಾಖಲೆ ನೀಡಿ, ಪಾಸ್ ಪಡೆಯುತ್ತೇವೆ’ ಎಂದರು.

ಮಂಜುನಾಥ ಈಟಿ, ಗಣೇಶ ಶಿರಾಲಿ, ಬಸವರಾಜ, ಸಾತು ಬನಸೊಡೆ, ಕುಮಾರ ತಳವಾರ, ಅಲ್ಲಾಭಕ್ಷ, ನವೀನಕುಮಾರ ಕರ್ಜಗಿ, ವಸಂತ ಭೋವಿ, ಭುವನೇಶ, ರಾಮಸ್ವಾಮಿ ಭೋವಿ, ಶ್ರೀಕಾಂತ ಕುಸೂರ, ಇಸ್ಮಾಯಿಲ್ ಮುಗಳಿಕಟ್ಟಿ, ಮಹಮ್ಮದ ಜಾಫರ್ ಚಿಲ್ಲೂರ, ಮುನ್ನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.