ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಹಣದ ಆಸೆಗೆ ಮಾಲೀಕನ ಕೊಲೆ ಮಾಡಿದ್ದವರ ಬಂಧನ

Published 18 ಸೆಪ್ಟೆಂಬರ್ 2023, 9:57 IST
Last Updated 18 ಸೆಪ್ಟೆಂಬರ್ 2023, 9:57 IST
ಅಕ್ಷರ ಗಾತ್ರ

ಶಿರಸಿ: ಹಣದ ಆಸೆಗೆ ಕೆಲಸ ನೀಡಿದ ಮಾಲೀಕನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಮೂರು ಆರೋಪಿಗಳನ್ನು ಇಲ್ಲಿನ ಬನವಾಸಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ವ್ಯಕ್ತಿಯ ಶವ ಠಾಣೆ ವ್ಯಾಪ್ತಿಯ ವಡ್ಡಿನಕೊಪ್ಪ ಅರಣ್ಯ ಭಾಗದಲ್ಲಿ ಪತ್ತೆಯಾಗಿತ್ತು. ಕೊಲೆ ಎಂದು ಪ್ರಾಥನಿಕ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ನಂತರ ತನಿಖೆ ಕೈಗೊಂಡ ಪೊಲೀಸರು ಕೊಲೆಯಾದ ವ್ಯಕ್ತಿ

ಹಾನಗಲ್ ತಾಲ್ಲೂಕಿನ ಹೊಸಗೆಜ್ಜೆಹಳ್ಳಿಯ ಅಶೋಕ್ ಉಪ್ಪಾರ್ ಎಂದು ಗುರುತಿಸಿದ್ದರು. ನಂತರ ತನಿಖೆ ಚುರುಕು ಮಾಡಿ, ಈತನ ಬಳಿಯೇ ಕೆಲಸ ಮಾಡಿಕೊಂಡಿದ್ದ ಕಿರಣ ಸುರಳೇಶ್ವರ (23), ನಿರಂಜನ ತಳವಾರ (19) ಹಾಗೂ ಗುಡ್ಡಪ್ಪ ತಿಳುವಳ್ಳಿ (19) ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.

ಮೊದಲ ಆರೋಪಿ ಕಿರಣ್ ಮಾಲೀಕನನ್ನು ಸೆ.13ರಂದು ಕರೆದುಕೊಂಡು ಗದ್ದೆ ಕೆಲಸಕ್ಕೆ ಹೋಗಿದ್ದಾನೆ. ಅಲ್ಲಿಂದ ಒಂದು ಬಾಡಿಗೆ ಕಾರನ್ನು ಪಡೆದು ಹಾನಗಲ್ ತಾಲ್ಲೂಕಿನ ಕೊಂಡೋಜಿ ಕ್ರಾಸ್ ಬಳಿ ಹೋಗಿದ್ದು, ಅಲ್ಲಿ ಉಳಿದ ಆರೋಪಿಗಳು ಸೇರಿ ಹಣವನ್ನು ನೀಡಲು ಮಾಲೀಕನನ್ನು ಹೆದರಿಸಿ, ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ. ಆಗ ಮಾಲೀಕ ಮೃತಪಟ್ಟಿದ್ದಾನೆ. ಶವವನ್ನು ಒಂದು ದಿನ ಅಲ್ಲಿಯೇ ಬಿಟ್ಟಿದ್ದಾರೆ. ನಂತರ ಇನ್ನೊಂದು ಬಾಡಿಗೆ ಕಾರು ಪಡೆದು ಶವವನ್ನು ಹಾಕಿಕೊಂಡು ಶಿರಸಿಗೆ ಬಂದು ವಡ್ಡಿನಕೊಪ್ಪ ಅರಣ್ಯ ಭಾಗದಲ್ಲಿ ಎಸೆದು ಹೋದ ಬಗ್ಗೆ ಒಪ್ಪಿಕೊಂಡಿದ್ದಾಗಿ ಶಿರಸಿ ಡಿವೈಎಸ್ಪಿ ಕೆ.ಎಲ್.ಗಣೇಶ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕೊಲೆಗೆ ಬಳಸಿದ ಎರಡು ಕಾರುಗಳನ್ನು, ಕೊಲೆಯಾದ ವ್ಯಕ್ತಿಯ ದ್ವಿಚಕ್ರ ವಾಹನ, ಮೊಬೈಲ್'ಗಳನ್ನು ಜಪ್ತು ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT