ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನದಲ್ಲಿ ತಾಳ್ಮೆ ಅಮೂಲ್ಯ ಸಂಪತ್ತು’

Last Updated 23 ಜುಲೈ 2022, 13:05 IST
ಅಕ್ಷರ ಗಾತ್ರ

ಕಾರವಾರ: ‘ತಾಳ್ಮೆಯು ಪ್ರತಿಯೊಬ್ಬರ ಜೀವನದ ಅಮೂಲ್ಯ ಸಂಪತ್ತು. ತಾಳ್ಮೆ ಎಂಬ ಮಹಾ ಸಂಪತ್ತು ನಮ್ಮೆಲ್ಲರ ಬದುಕಿನಲ್ಲಿ, ವ್ಯಕ್ತಿತ್ವದಲ್ಲಿ ಬರಲಿ. ಈ ಮೂಲಕ ಜೀವನ ಸುಖಮಯವಾಗಲಿ‌’ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ 11ನೇ ದಿನವಾದ ಶನಿವಾರ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಬೆಳಿಗ್ಗೆ ಕಾಳು ಬಿತ್ತಿ ಸಂಜೆಗೆ ಪೈರು ಬರಲು ಸಾಧ್ಯವೇ? ಹೀಗೆ ಜೀವನದಲ್ಲೂ ತಾಳ್ಮೆ ಅತ್ಯಂತ ಮಹತ್ವ. ಜೀವನದಲ್ಲೂ ನಾವು ಅವಸರ ಮಾಡುತ್ತೇವೆ. ಇದು ಅನಾಹುತಕ್ಕೆ ಕಾರಣವಾಗುತ್ತದೆ’ ಎಂದರು.

‘ಒಬ್ಬ ವ್ಯಕ್ತಿಯ ಬಗ್ಗೆ ತೀರ್ಮಾನಕ್ಕೆ ಬರುವ ಮೊದಲು ಸಾಕಷ್ಟು ಯೋಚಿಸಬೇಕು. ಯಾವ ವಿಷಯದ ಬಗ್ಗೆಯೂ ತೀರ್ಮಾನಕ್ಕೆ ಬರುವಾಗ ಅವಸರ ಮಾಡದೇ ಹಲವು ಬಾರಿ ಪರಾಮರ್ಶೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಚ್.ಸಿ.ಆಕಾಶ್ ಹಾಗೂ ಆದಿತ್ಯ.ಎಚ್.ಸಿ ಗಮಕ ವಾಚನ ನಡೆಸಿಕೊಟ್ಟರು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮತಾರಕ ಹವನ, ರುದ್ರಹೋಮ, ಆಂಜನೇಯನಿಗೆ ತ್ರಿಮಧುರಯುಕ್ತ ಬಾಳೆಹಣ್ಣಿನ ಹವನವನ್ನು ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT