ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ | ಹೆದ್ದಾರಿ ಹೊಂಡಮಯ: ಅಪಘಾತಕ್ಕೆ ಆಹ್ವಾನ

Published 3 ಆಗಸ್ಟ್ 2024, 5:50 IST
Last Updated 3 ಆಗಸ್ಟ್ 2024, 5:50 IST
ಅಕ್ಷರ ಗಾತ್ರ

ಭಟ್ಕಳ: ಪಟ್ಟಣದ 3 ಕಿ.ಮೀ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣ ಹೊಂಡಮಯವಾಗಿದ್ದು, ಲಘು ವಾಹನಗಳು ತಿರುಗಾಡದ ಸ್ಥಿತಿ ಇದೆ. ಟೋಲ್ ವಸೂಲಿ ಮಾಡುವ ಐಆರ್‌ಬಿಯವರು ರಸ್ತೆ ದುರಸ್ತಿಗೆ ಮುಂದಾಗದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿಯು ಪಟ್ಟಣದ ಕೋಟೇಶ್ವರ ರಸ್ತೆಯಿಂದ ರಂಗಿನಕಟ್ಟೆ ತನಕ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿಲ್ಲ. ಚತುಷ್ಪಥ ಮಾರ್ಗದಲ್ಲಿ ವೇಗವಾಗಿ ಬರುವ ವಾಹನಗಳು ಪಟ್ಟಣ ವ್ಯಾಪ್ತಿಯಲ್ಲಿ ಹೊಂಡ ಇರುವುದನ್ನು ಅರಿಯದೇ ವೇಗವಾಗಿ ತೆರಳಿ ಅನೇಕ ಅಪಘಾತಗಳು ಸಂಭವಿಸಿವೆ. ಅದರಲ್ಲೂ ಸ್ಥಳೀಯರು ಬೈಕ್‌ ಚಲಾಯಿಸಿಕೊಂಡು ಹೋಗುವಾಗ ಹೊಂಡ ಅರಿಯದೇ ನಿಯಂತ್ರಣ ತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

‘ಮಳೆಗಾಲದ ಪೂರ್ವದಲ್ಲಿ ಐ.ಆರ್.ಬಿಯವರು ಚತುಷ್ಪಥ ಹಾದಿಯನ್ನು ಮರುಡಾಂಬರೀಕರಣ ಮಾಡಿ ಸುಸ್ಥಿತಿಯಲ್ಲಿ ಇಡಬೇಕು. ಆದರೆ ಪಟ್ಟಣ ವ್ಯಾಪ್ತಿಯಲ್ಲಿ ಮಳೆಗಾಲ ಪೂರ್ವದಲ್ಲಿ ರಸ್ತೆಯ ಮರು ಡಾಂಬರೀಕರಣ ನಡೆದಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ರಸ್ತೆಯ ಡಾಂಬರ್‌ ಕಿತ್ತುಹೋಗಿ ಹೊಂಡಮಯವಾಗಿದೆ. ಪ್ರತಿದಿನ ಲಕ್ಷಲಕ್ಷ ಟೋಲ್ ವಸೂಲಿ ಮಾಡುವ ಐ.ಆರ್.ಬಿಯವರು ರಸ್ತೆ ದುರಸ್ತಿ ಮಾಡದೇ ವಾಹನ ಸವಾರರನ್ನು ಅಪಾಯದ ಅಂಚಿಗೆ ನೂಕುತ್ತಿದ್ದಾರೆ. ವೇಗವಾಗಿ ಬರುವ ವಾಹನಗಳು ಹೊಂಡಗಳನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತಿವೆ. ಶಾಲಾ ಸಮಯದಲ್ಲಿ ಮಕ್ಕಳು ವಾಹನದಲ್ಲಿ ಸಾಗುವಾಗ ಹೊಂಡ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಲಘುವಾಹನಗಳಿಗೆ ಅಪಘಾತ ಸಂಭವಿಸಿದರೆ ಹೊಣೆ ಯಾರು’ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರಾದ ಮೂಡಭಟ್ಕಳ ಶ್ರೀನಿವಾಸ ನಾಯ್ಕ.

ಮಳೆಗಾಲವಾದ ಕಾರಣ ಡಾಂಬರ್‌ ಉತ್ಪಾದನಾ ಘಟಕವನ್ನು ಬಂದ್‌ ಇಡಲಾಗಿದೆ. ಇನ್ನೆರಡು ದಿನಗಳಲ್ಲಿ ಡಾಂಬರ್‌ ಘಟಕ ಆರಂಭಿಸಿ ಹೆದ್ದಾರಿ ಹೊಂಡ ಮುಚ್ಚಿಸಲಾಗುವುದು
ಸುದೇಶ ಶೆಟ್ಟಿ ಐಆರ್‌ಬಿ ಸಹಾಯಕ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT