ಭಾನುವಾರ, 3 ಆಗಸ್ಟ್ 2025
×
ADVERTISEMENT
ADVERTISEMENT

ಉತ್ತರ ಕನ್ನಡ: ‘ಬೆಳಕು’ ನೀಡುವ ಜಿಲ್ಲೆಯಲ್ಲಿ ಕತ್ತಲು

Published : 21 ಜುಲೈ 2025, 4:36 IST
Last Updated : 21 ಜುಲೈ 2025, 4:36 IST
ಫಾಲೋ ಮಾಡಿ
Comments
ದಾಂಡೇಲಿ ಗ್ರಾಮೀಣ ಪ್ರದೇಶದಲ್ಲಿ ಹೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು 
ದಾಂಡೇಲಿ ಗ್ರಾಮೀಣ ಪ್ರದೇಶದಲ್ಲಿ ಹೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು 
ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರಲ್ಲಿ ವಿದ್ಯುತ್ ತಂತಿಗೆ ತಾಗುತ್ತಿರುವ ಮರದ ಟೊಂಗೆಯನ್ನು ಉದ್ದನೆಯ ಕೋಲು ಬಳಸಿ ತೆರವುಗೊಳಿಸಲು ಹೆಸ್ಕಾಂ ಲೈನ್‌ಮನ್ ಪ್ರಯತ್ನಿಸಿದರು
ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರಲ್ಲಿ ವಿದ್ಯುತ್ ತಂತಿಗೆ ತಾಗುತ್ತಿರುವ ಮರದ ಟೊಂಗೆಯನ್ನು ಉದ್ದನೆಯ ಕೋಲು ಬಳಸಿ ತೆರವುಗೊಳಿಸಲು ಹೆಸ್ಕಾಂ ಲೈನ್‌ಮನ್ ಪ್ರಯತ್ನಿಸಿದರು
ನಿರಂತರ ವಿದ್ಯುತ್ ನಿಲುಗಡೆಯ ಸಮಸ್ಯೆಯಿಂದಾಗಿ ಗ್ರಾಮೀಣ ಪ್ರದೇಶದ ಜನರು ಕಡ್ಡಾಯವಾಗಿ ಚಾರ್ಜಿಂಗ್ ಬ್ಯಾಟರಿ ಚಾಲಿತ ವಿದ್ಯುತ್ ಸೌಲಭ್ಯ ಅಳವಡಿಸಿಕೊಳ್ಳುವ ಸ್ಥಿತಿ ಬಂದಿದೆ
ನಾರಾಯಣ ನಾಯ್ಕ ಬೊಗರಿಬೈಲ್ ಗ್ರಾಮಸ್ಥ
ಬೇಸಿಗೆ ಅವಧಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಮಳೆಗಾಲದಲ್ಲಿ ಸಣ್ಣ ಗಾಳಿಮಳೆಗೂ ಟೊಂಗೆಗಳು ಮುರಿದುಬಿದ್ದು ವಿದ್ಯುತ್‌ ವ್ಯತ್ಯಯ ಉಂಟಾಗುತ್ತಿದೆ
ಷಣ್ಮುಖ ಮುಂಡಗೋಡ ಸಾಮಾಜಿಕ ಕಾರ್ಯಕರ್ತ
ಜೊಯಿಡಾ–ಕಾರವಾರ ಗಡಿಭಾಗದ ಸೂಳಗೇರಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ಒಂದೂವರೆ ತಿಂಗಳು ಕಳೆದಿದೆ. ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ
ನಾಗರಾಜ ನಾಯ್ಕ ಸೂಳಗೇರಿ ಗ್ರಾಮಸ್ಥ
ವಾರಗಟ್ಟಲೆ ಅಲೆದಾಡುವ ಅನಿವಾರ್ಯತೆ
ಜೊಯಿಡಾ ತಾಲ್ಲೂಕಿನ ಗುಂದ ಅಣಶಿ ಬಜಾರಕುಣಂಗ ಕುಂಡಲ ಕಾರ್ಟೋಳಿ ಉಳವಿ ತೇರಾಳಿ ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳ ಜನರು ವಾರಗಟ್ಟಲೆ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗುತ್ತಿದೆ. ತಾಲ್ಲೂಕು ಕೇಂದ್ರದಲ್ಲಿಯೂ ಮಳೆಗಾಲದಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗುವುದರಿಂದ ಗ್ರಾಮೀಣ ಪ್ರದೇಶಗಳಿಂದ ನೂರಾರು ರೂಪಾಯಿ ಖರ್ಚು ಮಾಡಿ ಕಚೇರಿ ಕಾರ್ಯಗಳಿಗೆ ಬರುವ ಜನರು ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ‘ಮಳೆಗಾಲದಲ್ಲಿ ಒಮ್ಮೆ ಕರೆಂಟ್ ಹೋದರೆ ಸುಮಾರು ಹದಿನೈದು ದಿನಗಳವರೆಗೆ ಬರುವುದೇ ಇಲ್ಲ. ಕಚೇರಿ ಕಾರ್ಯಗಳಿಗೆ ಹೋದರೆ ಝೆರಾಕ್ಸ್ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಪಡೆಯಲು ವಾರಗಟ್ಟಲೆ ಅಲೆಯಬೇಕಾಗುತ್ತದೆ’ ಎಂದು ಕಾಡಪೋಡ ಗ್ರಾಮಸ್ಥ ತುಕಾರಾಮ ವೇಳಿಪ ಗೋಳು ತೋಡಿಕೊಂಡರು.
ಒತ್ತಡ ತಪ್ಪಿಸಲು ವಿದ್ಯುತ್ ಕಡಿತ
ಭಟ್ಕಳ ತಾಲ್ಲೂಕಿನ ಹೆಬಳೆಯಲ್ಲಿರುವ 33 ಗ್ರೀಡ್‌‍ನ ಪರಿವರ್ತಕದಿಂದ ಭಟ್ಕಳದಾದ್ಯಂತ ಏಕಕಾಲದಲ್ಲಿ ವಿದ್ಯುತ್‌ ಪೂರೈಕೆ ಸಾಧ್ಯವಿಲ್ಲದ ಕಾರಣ ಗ್ರಾಮೀಣ ಭಾಗದದಲ್ಲಿ ಅಲ್ಲಲ್ಲಿ 1 ರಿಂದ 2 ತಾಸು ವಿದ್ಯುತ್ ಕಡಿತ ಮಾಡಿ ಪರಿವರ್ತಕದ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳಲಾಗುತ್ತಿದೆ. ಕೆಲದಿನಗಳ ಹಿಂದೆ ಭಟ್ಕಳಕ್ಕೆ ವಿದ್ಯುತ್‌ ಕೊರತೆ ಆಗದ ಹಾಗೇ ಹೆಚ್ಚುವರಿ ಪರಿವರ್ತಕ ಅಳವಡಿಸಲಾಗಿದೆ. ಆದರೂ ಒಮ್ಮೊಮ್ಮೆ ಹೆಚ್ಚಿನ ಲೋಡ್‌ ಬಿದ್ದಾಗ ಪವರ್‌ ಕಟ್‌ ಅನಿವಾರ್ಯ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT